ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು : ಗುಂಡಿತಪ್ಪಿಸಲು ಹೋಗಿ 100 ಅಡಿ ಆಳಕ್ಕೆ ಬಿದ್ದ ಲಾರಿ - ಚಾಲಕನಿಗೆ ಗಂಭೀರ ಗಾಯ

ಕೊಡಗು : ರಸ್ತೆಯಲ್ಲಿನ ಗುಂಡಿ ತಪ್ಪಿಸಲು‌ ಹೋಗಿ ಲಾರಿಯೊಂದು ಆಳಕ್ಕೆ ಉರುಳಿದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿ‌ ನಡೆದಿದೆ. ಕುಶಾಲನಗರದಿಂದ ವಿರಾಜಪೇಟೆ ಕಡೆಗೆ ಬರುತ್ತಿದ್ದ ಕೇರಳ ನೋಂದಣಿ ಲಾರಿ ಎಂದು ಹೇಳಲಾಗುತ್ತಿದೆ. ವಿರಾಜಪೇಟೆಯ ಮಾರಿಯಮ್ಮ ದೇವಾಲಯದ ಸಮೀಪದ ರಸ್ತೆಯಿಂದ 100 ಅಡಿ ಆಳದ ಗುಂಡಿಗೆ ಬಿದಿದ್ದೆ.

ಅಪಘಾತದಲ್ಲಿ ಲಾರಿ ಚಾಲಕ ಪ್ರವೀಣ್ ಗಂಭೀರ ಗಾಯಗಳಾಗಿದ್ದು, ಸ್ಥಳೀಯರ ನೆರವಿನಿಂದ ಚಾಲಕನ್ನ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸ್ಥಳಕ್ಕೆ ವಿರಾಜಪೇಟೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Edited By : Suman K
Kshetra Samachara

Kshetra Samachara

12/11/2024 12:32 pm

Cinque Terre

700

Cinque Terre

0