ಶಿವಮೊಗ್ಗ: ಜಾನಪದ ಲೋಕ ನಿರ್ಮಾತೃ ನಾಡೋಜ ಎಚ್.ಎಲ್. ನಾಗೇಗೌಡರು ಕಟ್ಟಿ ಬೆಳೆಸಿದ ಕರ್ನಾಟಕ ಜಾನಪದ ಪರಿಷತ್ತಿನಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜಾನಪದ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ವ್ಯಕ್ತಿಯನ್ನು ಗುರುತಿಸಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುತ್ತದೆ. ಪ್ರಸ್ತುತ ವರ್ಷ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೊಸೂರಿನ ಆಕಾಶವಾಣಿ, ದೂರದರ್ಶನ ಕಲಾವಿದರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು,ಹಾಗೂ ಕಿನ್ನರಜೋಗಿ ಜಾನಪದ ಕಲಾವಿದ ಶ್ರೀ ಗುಡ್ಡಪ್ಪ ಜೋಗಿ ಅವರಿಗೆ ನಾಡೋಜ ಎಚ್. ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೆ ಗುಡ್ಡಪ್ಪ ಜೋಗಿ ಅವರು ಕಳೆದ ಹಲವು ದಶಕಗಳಿಂದ ತಮ್ಮ ತಂಡದೊಂದಿಗೆ ಸರ್ಕಾರದ ಜನಜಾಗೃತಿ ಯೋಜನೆಗಳ ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರುತ್ತಾರೆ. ಮುಖ್ಯವಾಗಿ ಅಕ್ಷರತುಂಗ ಭ್ರೂಣಲಿಂಗ ಪತ್ತೆ ನಿಷೋಧ ಪಲ್ಸ್ ಪೋಲಿಯೋ ಎಚ್ಐವಿ ಏಡ್ಸ್ ಸೋಂಕು ತಡೆ ಕ್ಷಯರೋಗ ಅಯೋಡಿನ್ ಕೊರತೆ ಮತ್ತು ಅರಣ್ಯ ಇಲಾಖೆಯ ಪಶ್ಚಿಮ ಘಟ್ಟದ ಕಾಡು ಮತ್ತು ಕಾಡುಪ್ರಾಣ ಉಳಿಸಿ ಅಭಿಯಾನಗಳನ್ನ ರಾಜ್ಯದಾದ್ಯಂತ ತಿರುಗಾಡಿ ಜನಜಾಗೃತಿ ಮೂಡಿಸಿರುತ್ತಾರೆ.
ಗುಡ್ಡಪ್ಪ ಜೋಗಿ ಅವರು ಇಳಿ ವಯಸ್ಸಿನಲ್ಲಿ ವೇದಿಕೆ ಏರುವಾಗ ತಲೆಗೆ ಕೆಂಪು ಬಣ್ಣದ ಜರಿ ರುಮಾಲು ಕಟ್ಟಿ,ಕಪ್ಪು ಕೋಟು ಧರಿಸಿ, ಮಣಿಹಾರ ಧರಿಸಿಕೊಂಡು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕೈಯಲ್ಲಿ ಕಿನ್ನೂರಿ ಅಥವಾ ಚಿಟುಕು ಹಿಡಿದುಕೊಂಡರೆ ಲಾವಣಿ ಗೀಗಿ ಪದ ಅಶು ಕತೆ ಪೌರಾಣಿಕ ಕಥೆ ಜಾನಪದ ವಿದ್ವಾಂಸರು ಪುಟಗಟ್ಟಲೆ ಬಣ್ಣಿಸುವ ಜಾನಪದ ಶ್ರೀಮಂತಿಕೆ ಸೊಗಸುಗಾರಿಕೆ, ಸೊಗಡು ಇಂಪು ಗುಡ್ಡಪ್ಪ ಜೋಗಿ ಇವರ ಬಾಯಲ್ಲಿ ಹೊರಹೊಮ್ಮಿದಾಗ ಕಲಾಪ್ರೇಕ್ಷಕರನ್ನು ಮಂತ್ರ ಮಗ್ದರನ್ನಾಗಿಸುತ್ತದೆ.
ನವೆಂಬರ್ ತಿಂಗಳ 22 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಏರ್ಪಡಿಸಲಾಗಿದೆ.
Kshetra Samachara
11/11/2024 10:17 pm