ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು : ಗೃಹಸಚಿವರ ಜಿಲ್ಲೆಯಲ್ಲಿ ಹೆಚ್ಚಿದ ಗಾಂಜಾ ಘಾಟು - ಮಗನ ಸ್ಥಿತಿ ಕಂಡು ತಾಯಿ ಕಣ್ಣೀರು

ತುಮಕೂರು : ಗೃಹ ಸಚಿವ ಡಾ ಜಿ ಪರಮೇಶ್ವರ್ ಜಿಲ್ಲೆಯಲ್ಲಿ ಗಾಂಜಾ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು ಅಮಾಯಕ ಯುವಕರು ಗಾಂಜಾ ಅಮಲೇರಿಸಿಕೊಂಡು ಬಲಿಯಾಗುತ್ತಿದ್ದಾರೆ.

ಗಾಂಜಾ ಸೇದುವ ಚಟ ಬೆಳೆಸಿಕೊಂಡ ಮಗನ ಸ್ಥಿತಿ ಕಂಡು ಇಲ್ಲೊಬ್ಬ ತಾಯಿ ಕಣ್ಣೀರು ಹಾಕುತ್ತಿದ್ದಾರೆ. ದಯವಿಟ್ಟು ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಮಗನನ್ನ ಸಾಯಿಸೋಕೆ ಅನುಮತಿ ಕೊಡಿ ಎಂದು ಮನವಿ ಮಾಡಿದ್ದಾರೆ.

ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣದ ನಿವಾಸಿ ರೇಣುಕಮ್ಮ ನನ್ನ ಮಗ ಅಭಿಷೇಕ್ ಸರಿಯಿಲ್ಲ, ಗಾಂಜಾ ಸೇದುತ್ತಾನೆ, ಡ್ರಗ್ಸ್ ತಗೋತಾನೆ, ಸಿಕ್ಕ ಸಿಕ್ಕವರ ಮೇಲೆ ಹೊಡೆದಾಟಕ್ಕೆ ಹೋಗ್ತಾನೆ. ಹೆಣ್ಣು ಮಕ್ಕಳ ಬಗ್ಗೆ ಲಘುವಾಗಿ ಮಾತಾಡ್ತಾನೆ, ಜನರ ಕೈಲಿ ಒದೆ ತಿಂತಾನೆ. ಅದನ್ನು ನಾನು ನೋಡಕ್ಕೆ ಆಗಲ್ಲ, ಮರ್ಯಾದೆ ಹೋಗ್ತಾ ಇದೆ.

ದಯಮಾಡಿ ನನ್ ಮಗನ್ನ ಜೈಲಿಗೆ ಹಾಕಿ. ನನಗೆ ಅವನನ್ನು ಸಾಯಿಸಲಿಕ್ಕೆ ಪರ್ಮಿಷನ್ ಕೊಡಿ ಎಂದು ಹೆತ್ತ ತಾಯಿಯು ಪೊಲೀಸರಲ್ಲಿ ಮನವಿ ಮಾಡಿ ಕಣ್ಣೀರು ಹಾಕಿದ್ದಾರೆ.

Edited By : Nagesh Gaonkar
PublicNext

PublicNext

10/11/2024 05:44 pm

Cinque Terre

25.9 K

Cinque Terre

2

ಸಂಬಂಧಿತ ಸುದ್ದಿ