ಯಲ್ಲಾಪುರ: ತಾಲೂಕಿನ ಅರಬೈಲ್ ಶಾಲೆಯ ಮುಖ್ಯಾಧ್ಯಾಪಕಿ, ಸಾಹಿತಿ, ಶಿವಲೀಲಾ ಹುಣಸಗಿಯ ಕಥಾಸಂಕಲನ ಗೋರಿಯ ಸುತ್ತ ಸಪ್ತಪದಿ ತುಳಿದಾಗ ಕೃತಿಗೆ ಹಾಸನದ ಮಾಣಿಕ್ಯ ಪ್ರಕಾಶನದ ರಾಜ್ಯಮಟ್ಟದ ಪ್ರತಿಷ್ಠಿತ ದತ್ತಿ ಗದ್ಯ ಮಾಣಿಕ್ಯ ಲಭಿಸಿದ್ದು, ರವಿವಾರ ಹಾಸನದಲ್ಲಿ ಶಿವಲೀಲಾ ಹುಣಸಗಿಯವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಹಾಸನದ ಮಾಣಿಕ್ಯ ಪ್ರಕಾಶನ ಸಂಸ್ಥೆಯ ದಿ.ನಿಂಗಪ್ಪ ಮಲ್ಲಪ್ಪ ಮೇಟಿ ಸ್ಮಾರಕ ದತ್ತಿ ಗದ್ಯ ಪ್ರಶಸ್ತಿ ಇದಾಗಿದ್ದು,ಈ ಪ್ರಶಸ್ತಿಯು ಮೂರು ಸಾವಿರ ರೂ ನಗದು, ಸ್ಮರಣಿಕೆ, ಪ್ರಶಸ್ತಿಪತ್ರವನ್ನು ಒಳಗೊಂಡಿದೆ. ರವಿವಾರ ಹಾಸನದ ಸಂಸ್ಕೃತ ಭವನದಲ್ಲಿ ನಡೆದ ರಾಜ್ಯಮಟ್ಟದ ಒಂಭತ್ತನೇ ಕವಿಕಾವ್ಯ ಸಂಭ್ರಮ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ, ಹಿರಿಯ ಸಾಹಿತಿ ವಿಶ್ವೇಶ್ವರ ಮೇಟಿ ಮುಂಬಯಿ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಖ್ಯಾತ ಲೇಖಕರಾದ ಸುಬ್ಬು ಹೊಲೆಯಾರ್, ಅಮರೇಶ ಪಾಟೀಲ್, ನಾಗರಾಜ ಹುತ್ತೂರ, ಸಾಹಿತಿ ಶೈಲಜಾ, ಮಾಣಿಕ್ಯ ಪದ್ಮಾವತಿ, ರವಿ ನಕಲಗೂಡು, ಸಿ.ಎನ್ ಲೀಲಾವತಿ, ಶಂಕರ ನಾಯಕ, ಮಣಿಕ್ಯ ಪ್ರಕಾಶನದ ಸಂಸ್ಥಾಪಕ ಅಧ್ಯಕ್ಷರಾದ ದೀಪಾ ಉಪ್ಪಾರ, ಕೇ.ಕ.ಸಾ.ವೇ.ಸಂಸ್ಥಾಪಕರಾದ ಕೊಟ್ರೇಶ ಉಪ್ಪಾರ ಹಾಗೂ ನೂರಾರು ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು
Kshetra Samachara
10/11/2024 02:37 pm