ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಿನಿಮಾ ಆಸೆ ತೋರಿಸಿ ಹನಿ ಖೆಡ್ಡಾಗೆ ಕೆಡವಿ 40 ಲಕ್ಷ ಪೀಕಿದ ಸುಂದರಿ ಅಂಡ್ ಗ್ಯಾಂಗ್ ವಿರುದ್ಧ ಎಫ್ ಐ ಆರ್

ಬೆಂಗಳೂರು: ಸಿನಿಮಾ ಹೆಸ್ರಲ್ಲಿ ಆ ಸುಂದರಿ ಬ್ಯುಸಿನೆಸ್ ಮೆನ್ ಗೆ ಹನಿ ಗಾಳ ಬೀಸಿದ್ದಾಳೆ. ಸಿನಿಮಾ‌ ಮಾಡೋಣ, ನಾನು ಅದೇ ಫೀಲ್ಡ್ ನಲ್ಲಿದ್ದೇನೆ ಅಂತ ಕಲರ್ ಕಲರ್ ಕತೆ ಕಟ್ಟಿದ್ದಾಳೆ. ಸುಂದರಿ ಮಾತು ನಂಬಿ ಆ ಬ್ಯುಸಿನೆಸ್ ಮ್ಯಾನ್‌ ಕೂಡ ಆಕೆಯ ಸಂಗ ಮಾಡಿದ್ದಾನೆ. ಇದಾದ ಕೆಲ ದಿನಗಳ‌ ನಂತರ ಡೈರೆಕ್ಟರ್ ಗೆ ಹಣದ ಕಷ್ಟ ಇದೆ ಅಂತ ನಾಲ್ಕು ಲಕ್ಷ ಹಣ ಪಡೆದಿದ್ದಾಳೆ. ನಂತರ ಹಣ ವಾಪಸ್ ಕೇಳಿದ್ರೆ ತನ್ನ ರೂಮಿಗೆ ಕರೆಸಿಕೊಂಡು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿ ಅದನ್ನ ವಿಡಿಯೋ ಮಾಡಿಕೊಂಡಿರೋದಾಗಿ ದೂರುದಾರ ಆರೋಪಿಸಿದ್ದಾನೆ.

ಇಷ್ಟಕ್ಕೆ ಸುಮ್ಮನಾಗದ ಆ ಸುಂದರಿ ಇದೇ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಬ್ರೇಸ್ ಲೈಟ್, ಚೈನ್ ಅಂತೆಲ್ಲಾ ಸುಮಾರು ನಲವತ್ತು ಲಕ್ಷ ಹಣ ಪೀಕಿದ್ದಾಳಂತೆ. ಇಷ್ಟಕ್ಕೂ ಸುಮ್ಮನಾಗದೆ ಕಾರು ಕೊಡಿಸು ಅಂತ ದುಂಬಾಲು ಬಿದ್ದಿದ್ಳಂತೆ. ಇದಕ್ಕೆ ಒಪ್ಪದಿದ್ದಾಗ ಆರೋಪಿ ಕಾವ್ಯ ತನ್ನ ಸ್ನೇಹಿತರಾದ ರವಿ ಮತ್ತು ದಿಲೀಪ್ ಎಂಬುವವರಿಂದ ಕರೆ ಮಾಡಿಸಿ ಹಣಕ್ಕೆ ಧಮ್ಕಿ ಹಾಕಿಸಿದ್ದಾಳಂತೆ. ಹಣ ಕೊಡದಿದ್ರೆ ವಿಡಿಯೋಗಳನ್ನ ಟಿವಿಗೆ ಕೊಡೋದಾಗಿ ಬ್ಲಾಕ್ ಮೇಲ್ ಮಾಡಿದ್ರಂತೆ. ಅಷ್ಟೇ ಅಲ್ಲದೇ ಹಣ ನೀಡದಿದ್ದಾಗ ಸೋಶಿಯಲ್ ಮೀಡಿಯಾದಲ್ಲಿ ದೂರುದಾರನ ಫೋಟೋ ಹಾಕಿ ಮಾನ ಹರಣ ಮಾಡಿದ್ದು, ದೂರುದಾರ ಅಶೋಕನಗರ ಠಾಣೆಯಲ್ಲಿ ಕಾವ್ಯ, ದಿಲೀಪ್, ರವಿ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ. ಸದ್ಯ ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ‌.

Edited By : Ashok M
PublicNext

PublicNext

19/09/2024 03:15 pm

Cinque Terre

27.77 K

Cinque Terre

0