ಹಾವೇರಿ: ಮೆಕ್ಕೆಜೋಳದ ಬೆಳೆ ತೆನೆ ಕಟ್ಟದ ಹಿನ್ನೆಲೆಯಲ್ಲಿ ರೈತನೊಬ್ಬ ಮೂರು ಎಕರೆ ಬೆಳೆ ನಾಶಪಡಿಸಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದಲ್ಲಿ ನಡೆದಿದೆ. ಕಾಕೋಳ ಗ್ರಾಮದ ರೈತ ದ್ಯಾಮಪ್ಪ ಹಿತ್ತಲಮನಿ ಮೂರು ಎಕರೆ ಮೆಕ್ಕೆಜೋಳದ ಬೆಳೆಯನ್ನ ರೋಟರ್ ಹೊಡೆದು ನಾಶ ಮಾಡಿದ್ದಾನೆ.
ಮೂರು ತಿಂಗಳ ಹಿಂದೆ ಒಂದು ಲಕ್ಷಕ್ಕೂ ಅಧಿಕ ರೂಪಾಯಿ ಖರ್ಚು ಮಾಡಿ ಮೆಕ್ಕೆಜೋಳ ಬೆಳೆಯನ್ನ ದ್ಯಾಮಪ್ಪ ಬೆಳೆದಿದ್ದ. ಬೆಳೆ ಆಳೆತ್ತರ ಬೆಳೆದರೂ ತೆನೆ ಮಾತ್ರ ಕಟ್ಟಿರಲಿಲ್ಲ. ಇದರಿಂದ ಬೇಸತ್ತ ರೈತ ಟ್ರ್ಯಾಕ್ಟರ್ ನಿಂದ ಮೆಕ್ಕೆಜೋಳದ ಬೆಳೆಗೆ ರೋಟರ್ ಹೊಡೆದು ನಾಶ ಮಾಡಿದ್ದಾನೆ. ಬೆಳೆ ತೆನೆ ಕಟ್ಟದಿರಲು ಏನು ಕಾರಣ ಗೊತ್ತಾಗಬೇಕು ಮತ್ತು ತನಗೆ ಸೂಕ್ತ ಪರಿಹಾರ ನೀಡಬೇಕು ಎಂದು ದ್ಯಾಮಪ್ಪ ಒತ್ತಾಯಿಸಿದ್ದಾನೆ.
PublicNext
18/09/2024 06:40 pm