ಹಾವೇರಿ : ಹಾವೇರಿ ಜಿಲ್ಲೆ ರಟ್ಟಿಹಳ್ಳಿ ಪಟ್ಟಣಕ್ಕೆ ಶ್ರೀ ರಾಮಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ್‌ಗೆ ನಿರ್ಬಂಧ ವಿಧಿಸಿ ಹಾವೇರಿ ಜಿಲ್ಲಾಧಿಕಾರಿ ವಿಜಯಮಹಾಂತೇಶ್ ದಾನಮ್ಮನವರ್ ಆದೇಶಿಸಿದ್ದಾರೆ.
ಮುತಾಲಿಕ್ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮಕ್ಕೆ ನಿರ್ಬಂಧ ವಿಧಿಸಲಾಗಿದೆ.ರಟ್ಟಿಹಳ್ಳಿ ನಗರದ ಶ್ರೀ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾನೆ ವೇಳೆ ಈ ಹಿಂದೆ ಗಲಭೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಶ್ರೀ ಬೀರಲಿಂಗೇಶ್ವರ ಗೆಳೆಯರ ಬಳಗ ಆಯೋಜಿಸಿದ ಮೂರ್ತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿಕೆ ತಡೆಯಲು ಮುತಾಲಿಕಗೆ ಹಾವೇರಿ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.
ರಟ್ಟಿಹಳ್ಳಿ ಪಟ್ಟಣದ ಕುರುಬಗೇರಿ ಕ್ರಾಸ್ ಬಳಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿ ವಿಸರ್ಜನೆ ಗುರುವಾರ ಇರುವ ಕಾರಣ ಈ ಆದೇಶ ನೀಡಲಾಗಿದೆ. ಈ ಗಣೇಶ ಮೂರ್ತಿ ವಿಸರ್ಜನೆ ವೇಳೆ ಪ್ರಮೋದ ಮುತಾಲಿಕ ಭಾಷಣ ಗಲಭೆ ಹಚ್ಚುವ ಸಾಧ್ಯತೆ ಇರುವ ಕಾರಣ ನಿಷೇಧಿಸಲಾಗಿದೆ.
PublicNext
12/09/2024 11:38 am