ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಮೂರು ದಶಕವಾದರೂ ಇಲ್ಲದ ಸುಸಜ್ಜಿತ ಕಟ್ಟಡ

ಹಾವೇರಿ: ಹಾವೇರಿ ತಾಲೂಕು ಚಿಕ್ಕಗ್ರಾಮಗಳಲ್ಲಿ ಒಂದು ಬಿದರಗಡ್ಡಿ. ಈ ಗ್ರಾಮದಲ್ಲಿ ಸುಸಜ್ಜಿತ ಅಂಗನವಾಡಿ ಕಟ್ಟಡ ನಿರ್ಮಿಸಬೇಕು ಎನ್ನುವದು ಗ್ರಾಮಸ್ಥರ 30 ವರ್ಷಗಳ ಕನಸು. ಆದರೆ ಈ ಕನಸು ನನಸಾಗುವದು ಇರಲಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೆ ಸರಿಯಾದ ಬಾಡಿಗೆ ಕಟ್ಟಡ ಸಹ ದೊರಕಿಲ್ಲ. ಪರಿಣಾಮ ತಗಡಿನ ಶೆಡ್‌ನಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ. ಇಲ್ಲಿ ಸುಮಾರು 50 ಕ್ಕೂ ಅಧಿಕ ಚಿಣ್ಣರು ದಿನನಿತ್ಯ ಆಟಪಾಠಕ್ಕೆ ಬರುತ್ತಿದ್ದಾರೆ.

ಕಿರಿದಾದ ಈ ಅಂಗನವಾಡಿ ಕಟ್ಟಡದಲ್ಲಿ ಗಾಳಿ ಬೆಳಕು ಇಲ್ಲ. ವಿದ್ಯುತ್ ಸಂಪರ್ಕವಿಲ್ಲದ ಮಕ್ಕಳು ಕತ್ತಲಲ್ಲಿ ಓದುವ ಅನಿವಾರ್ಯತೆ ಇದೆ. ಇನ್ನು ಮಕ್ಕಳಿಗೆ ಆಟವಾಡಲು ಓದಲು ಆಟಪಾಠ ಮಾಡಲು ಯಾವುದೇ ಸಲಕರಣೆಗಳಿಲ್ಲ. ಇರುವ ಚಿಕ್ಕದಾದ ಕೊಠಡಿಯಲ್ಲಿ ಕುಳಿತು ಮಕ್ಕಳು ಓದಬೇಕು. ಮಕ್ಕಳಿಗೆ ಇದರಲ್ಲಿ ಅಡುಗೆ ಮಾಡುವದು ಹೇಗೆ ಆಹಾರ ವಿತರಣೆ ಮಾಡುವದು ಮಕ್ಕಳು ಹೇಗೆ ಆಹಾರ ಸೇವಿಸಬೇಕು ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ.

ತಗಡಿನ ಶೆಡ್‌ನಲ್ಲಿ ಮಳೆಯಾಗುತ್ತಿದ್ದರೇ ತಗಡಿನ ಮೇಲೆ ಮಳೆಹನಿ ಬೀಳುವ ಸದ್ದು ಕೇಳುತ್ತದೆ. ಬೇಸಿಗೆಕಾಲದಲ್ಲಿ ಇಲ್ಲಿ ಉಸಿರಾಡುವುದೇ ಕಷ್ಟ. ಇನ್ನು ಗಾಳಿ ಬಿಟ್ಟರಂತೂ ವಿದ್ಯಾರ್ಥಿಗಳು ಅಪ್ಪಿಕೊಂಡು ಕುಳಿತುಕೊಳ್ಳುತ್ತಾರೆ. ಗಾಳಿಗೆ ತಗಡಿನ ಶೆಡ್ ಹಾರಿಹೋಗುವಂತಹ ಶಬ್ದವಾಗುತ್ತೆ ಮಕ್ಕಳು ಹೆದರಿ ಮುದುಡಿ ಕುಳಿತಕೊಳ್ಳುತ್ತಾರೆ. ತಗಡು ಹಾರಿಹೋಗದಂತೆ ತಡಗಿನ ಮೇಲೆ ಕಲ್ಲುಗಳನ್ನಿಡಲಾಗಿದೆ.

ಗ್ರಾಮದಲ್ಲಿ ಸರಿಯಾದ ಕಟ್ಟಡವಿಲ್ಲದ ಕಾರಣ ತಗಡಿನ ಶೆಡ್‌ನಲ್ಲಿ ಐದು ವರ್ಷದಿಂದ ಬಾಡಿಗೆ ಪಡೆದು ಅದರಲ್ಲಿ ಅಂಗನವಾಡಿ ಕೇಂದ್ರ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಬಾಡಿಗೆ ಇರುವ ಕಟ್ಟಡ ಇದೊಂದೆ ಇದರಲ್ಲಿಯೇ ಅಂಗನವಾಡಿ ಕೇಂದ್ರ ನಡೆಸುತ್ತಿದ್ದೇನೆ. ಈ ಕುರಿತಂತೆ ಮೇಲಾಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆದಿದ್ದೇನೆ ಮನವಿ ಮಾಡಿದ್ದೇನೆ. ಈ ವರ್ಷವಾಗುತ್ತೆ ಮುಂದಿನ ವರ್ಷವಾಗುತ್ತೆ ಎಂದು ಎದುರುನೋಡುತ್ತಿದ್ದೇನೆ ಎನ್ನುತ್ತಾರೆ ಅಂಗನವಾಡಿ ಶಿಕ್ಷಕಿ ಸುಮಿತ್ರಾ.

Edited By : Shivu K
PublicNext

PublicNext

10/09/2024 10:19 pm

Cinque Terre

34.99 K

Cinque Terre

0

ಸಂಬಂಧಿತ ಸುದ್ದಿ