ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಜಿಲ್ಲೆಯಾದ್ಯಂತ 472 ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆ - ಹಬ್ಬಕ್ಕೆ ಮುನ್ನಾದಿನ ಖರೀದಿ ಸಂಭ್ರಮ

ಉಡುಪಿ: ಜಿಲ್ಲೆಯಾದ್ಯಂತ ವಿಘ್ನ ವಿನಾಶಕನ ಪೂಜೆಗೆ ಭರದ ಸಿದ್ಧತೆ ಪ್ರಾರಂಭವಾಗಿದೆ. ಚೌತಿ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಾರ ವಹಿವಾಟು ಭರದಿಂದ ನಡೆಯುತ್ತಿದೆ. ನಗರದ ಕೆ.ಎಮ್‌ ಮಾರ್ಗ, ರಥಬೀದಿಯ ಸುತ್ತಲೂ ಹೊರ ಜಿಲ್ಲೆಯ ಹೂ ವ್ಯಾಪಾರಿಗಳು, ಕಬ್ಬು ವ್ಯಾಪಾರಿಗಳು ಮಾರಾಟದಲ್ಲಿ ತೊಡಗಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಬ್ಬಿನ ಬೆಲೆ ತುಸು ಇಳಿಕೆಯಾಗಿದೆ. ಕಳೆದ ವರ್ಷ 80 ರೂ. ಇದ್ದ 1 ಕೋಲು ಕಬ್ಬಿನ ಬೆಲೆ ಈ ಬಾರಿ 60 ರೂ.ಗೆ ಮಾರಾಟವಾಗುತ್ತಿದೆ. ಸೇವಂತಿಗೆ ದರ ಇಳಿಕೆಯಾಗಿದ್ದು, ಸೇವಂತಿಗೆ ಪ್ರತಿ ಮಾರಿಗೆ 100 ರೂ., ಕಾಕಡ 100 ರೂ., ಅಬ್ಬಲ್ಲಿಗೆ 70 ರೂ., ಮಲ್ಲಿಗೆ ಅಟ್ಟೆಗೆ 830 ರೂ., ಜಾಜಿ 570 ರೂ. ನಿಗದಿಯಾಗಿದೆ.

ಜಿಲ್ಲೆಯಾದ್ಯಂತ ಈ ವರ್ಷ 472 ಕಡೆಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಟಾಪನೆ ಮಾಡಲಾಗುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಪೊಲೀಸರೂ ಕೂಡ ಭದ್ರತಾ ಕ್ರಮ ಕೈಗೊಂಡಿದ್ದಾರೆ. ಸರ್ವಧರ್ಮೀಯರ ಶಾಂತಿ ಸಭೆಯನ್ನೂ ಆಯೋಜನೆ ಮಾಡಿದ್ದಾರೆ.

Edited By : Suman K
Kshetra Samachara

Kshetra Samachara

06/09/2024 04:50 pm

Cinque Terre

7.09 K

Cinque Terre

1

ಸಂಬಂಧಿತ ಸುದ್ದಿ