ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಅಶ್ವಿನಿ ಪುನೀತ್​ಗೆ ಬಾಳು ಕೊಡಲು ನಿರ್ಧರಿಸಿದ್ದೇನೆ' - ದೊಡ್ಮನೆಗೂ ತಟ್ಟಿದ Deepfake ಬಿಸಿ

ಬೆಂಗಳೂರು: ಕನ್ನಡ ಚಿತ್ರರಂಗದ ಪವರ್ ಸ್ಟಾರ್, ಡಾ ಪುನೀತ್‌ ರಾಜ್‌ಕುಮಾರ್ ಸ್ಥಾವನ್ನು ಪತ್ನಿ ಅಶ್ವಿನಿ ತುಂಬುತ್ತಿದ್ದಾರೆ. ಹೀಗಿದ್ದರೂ ಕೆಲ ಕಿಡಿಗೇಡಿಗಳು ಮಾತ್ರ ಅವರನ್ನು ಅವಮಾನಿಸುವ ಹೇಯ ಕೃತ್ಯವನ್ನು ಎಸಗುತ್ತಿದ್ದಾರೆ. ಇದೀಗ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಅವರ ಡೀಪ್​ಫೇಕ್​ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಕಿಡಿಗೇಡಿಯೋರ್ವ ಅತಿರೇಕ ಪ್ರದರ್ಶಿಸಿದ್ದಾನೆ.

ಯೋಗೇಂದ್ರ ಪ್ರಸಾದ್​ ಎಂಬ ಎಕ್ಸ್‌​ ಖಾತೆಯಲ್ಲಿ ಡೀಪ್​ಫೇಕ್​ ವಿಡಿಯೋ ಹಂಚಿಕೊಳ್ಳಲಾಗಿದ್ದು, ಗಂಡ ಸತ್ತ ಮು** ಅಶ್ವಿನಿ ಪುನೀತ್​ ರಾಜ್​ಕುಮಾರ್​ಗೆ ಬಾಳು ಕೊಡಲು ನಿರ್ಧರಿಸಿದ್ದೇನೆ 29 October 2024 ರಂದು ನಾನು ವಿವಾಹ ವಾಗಲಿದೆನೆ ದಯವಿಟ್ಟು ಅಪ್ಪು ಬಾಸ್ ಅಭಿಮಾನಿಗಳು ರಾಜವಂಶ ಅಭಿಮಾನಿಗಳು ಎಲರೂ ಬಂದು ಆಶೀರ್ವಾದ ಮಾಡಬೇಕು ಎಂದು ನಮ್ಮ ಸವಿನಯ ಆಮಂತ್ರಣ. ಸ್ಥಳ : ಶ್ರೀ ಕಂಠೀರವನಗರ ಸ್ಟುಡಿಯೋಸ್, ನಾರ್ತ್ ವೆಸ್ಟ್ ಬೆಂಗಳೂರು ಎಂದು ಬರೆಯಲಾಗಿದೆ. ಅಲ್ಲದೇ ನೇರವಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಟ್ಯಾಗ್ ಮಾಡಿದ್ದಾನೆ.

ಇನ್ನು ಕಿಡಿಗೇಡಿಯ ಈ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ಡೀಪ್‌ಫೇಕ್ ವಿಡಿಯೋ ನೋಡಿ ಕಿಡಿಕಾರಿರುವ ನೆಟ್ಟಿಗರು ಕಠಿಣ ಕ್ರಮಕ್ಕೆ ಆಗ್ರಹಿಸಿ ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್‌ ಮಾಡಿದ್ದಾರೆ. ಕೂಡಲೇ ಈ ದುರುಳನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಯಾರು ಈ ಯೋಗೇಂದ್ರ ಪ್ರಸಾದ್?

ಟ್ವಿಟರ್‌ನಲ್ಲಿ ಕೇವಲ 100 ಫಾಲೋವರ್ಸ್‌ ಹೊಂದಿರುವ ಯೋಗೇಂದ್ರ ಪ್ರಸಾದ್ ಎಂಬ ಹೆಸರಿನ ಈ ವ್ಯಕ್ತಿ ತಾನು ರಾಜವಂಶದ ಅಭಿಮಾನಿ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ತಾನು ಚಿತ್ರನಟ ಹಾಗೂ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳ, ಬಿನ್ನಿ ಪೇಟೆ ಘಟಕದ ಅಧ್ಯಕ್ಷ ಎಂದು ತನ್ನ ಬಯೋನಲ್ಲಿ ಹಾಕಿಕೊಂಡಿದ್ದು, ತನ್ನ ಟ್ವಿಟರ್‌ ಪೋಸ್ಟ್‌ ಗಳಲ್ಲಿ ಟ್ರೋಲ್ ವಿಚಾರಗಳನ್ನು ಹಾಕಿಕೊಂಡಿದ್ದಾನೆ.

ಇದೀಗ ಕಿಡಿಗೇಡಿಯೋರ್ವ ಈ ರೀತಿ ಡೀಪ್​​ಫೇಕ್​ ವಿಡಿಯೋ ಹರಿಬಿಟ್ಟಿದ್ದು, ಈ ವಿಡಿಯೋ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ತಲುಪುವ ಮುನ್ನವೇ ಕ್ರಮಗಳು ತೆಗೆದುಕೊಳ್ಳಬೇಕು ಎಂದು ಅನೇಕರು ಬೆಂಗಳೂರು ಪೊಲೀಸ್‌, ಸೈಬರ್ ಕ್ರೈಂಗೆ ಟ್ಯಾಗ್ ಮಾಡಿದ್ದಾರೆ.

Edited By : Vijay Kumar
PublicNext

PublicNext

31/08/2024 08:28 am

Cinque Terre

256.81 K

Cinque Terre

10