ಬೆಂಗಳೂರು: ಸ್ನೇಹ ಅಂತ ಒಳಗೊಳಗೆ ಸ್ಕೀಮು ಹಾಕ್ತಾರೆ ಅನ್ನೋ ಹಾಡಿನ ಸಾಲು ಕೆಲವೊಮ್ಮೆ ಸತ್ಯ ಅನಿಸುತ್ತೆ. ಅದ್ರಲ್ಲೂ ಕಾಲೇಜಿಗೆ ಹೋಗೋ ಹುಡುಗಿಯರು ಮಾತ್ರ ಕಂಡಕಂಡವರ ಜೊತೆಗೆ ಸ್ನೇಹ ಮಾಡೋ ಮೊದಲು ಎಚ್ಚರವಾಗಿರಬೇಕು.
ಮೊದ ಮೊದಲು ಒಳ್ಳೆಯವರಂತೆ ನಟಿಸಿ ಸ್ನೇಹಿತರಾಗ್ತಾರೆ. ಆಮೇಲೆ ಕಾಫಿ, ಊಟ, ತಿಂಡಿ ಎಂದು ಕರೆದುಕೊಂಡು ಹೋಗ್ತಾರೆ.
ಹೋಗ್ತಾ ಹೋಗ್ತಾ ನಿಮ್ಮ ಸೀಕ್ರೆಟ್ ಎಲ್ಲವನ್ನೂ ತಿಳಿದುಕೊಳ್ತಾರೆ. ಇದಾದ ನಂತರ ಅವ್ರ ಅಸಲಿ ಮುಖವಾಡ ಬಿಚ್ಚಿಡ್ತಾರೆ.
ಹುಡುಗಿಯರು ಸ್ನೇಹಿತರ ಜೊತೆ ಇರುವ ಫೋಟೋ ತೆಗದು ಬ್ಲಾಕ್ ಮೇಲ್ ಮಾಡೋ ಸ್ನೇಹಿತರು ಇದ್ದಾರೆ. ಇದೇ ರೀತಿ ಕಾಲೇಜು ಯುವತಿಯನ್ನ ಬ್ಲಾಕ್ ಮೇಲ್ ಮಾಡ್ತಿದ್ದ ಸ್ನೇಹಿತನನ್ನ ಪೊಲೀಸ್ರು ಬಂಧಿಸಿದ್ದಾರೆ. ತೇಜಸ್ (19 ) ಬಂಧಿತ ಆರೋಪಿಯಾಗಿದ್ದು, ಯವತಿ ಸ್ನೇಹಿತನ ಜೊತೆಗಿನ ಫೋಟೊ ಕುಟುಂಬಸ್ಥರಿಗೆ ಕಳಿಸೋದಾಗಿ ಬೆದರಿಕೆ ಹಾಕ್ತಿದ್ನಂತೆ. ಪ್ರೀತಿ ಮಾಡ್ತಿದ್ದೀಯಾ ಎಂದು ಕಾಲೇಜು ಹೋಗದಂತೆ ಮಾಡ್ತೀನಿ ಎಂದು ಬ್ಲಾಕ್ ಮೇಲ್ ಮಾಡಿದ್ದಾನೆ.
ಈ ವಿಚಾರವನ್ನ ಯಾರಿಗೂ ಹೇಳಬಾರದೆಂದರೆ ಹಣ, ಚಿನ್ನ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಈ ವಿಚಾರವಾಗಿ ಕಾಲೇಜು ಹಾಗೂ ಮನೆ ಬಳಿ ಬಂದು ಹೆದರಿಸ್ತಿದ್ದ ತೇಜಸ್‌ಗೆ ಹೆದರಿ ಮನೆಯಲ್ಲಿದ್ದ ಚಿನ್ನವನ್ನ ವಿದ್ಯಾರ್ಥಿನಿ ತಂದು ಕೊಟ್ಟಿದ್ದಾಳೆ. ಹಂತ ಹಂತ ವಾಗಿ ಮೂರುವರೆ ಲಕ್ಷ ಮೌಲ್ಯದ 75 ಗ್ರಾಂ ಚಿನ್ನಾಭರಣವನ್ನ ಪಿಯುಸಿ ವಿದ್ಯಾರ್ಥಿನಿಯಿಂದ ಸುಲಿಗೆ ಮಾಡಿದ್ದ. ಮನೆಯಲ್ಲಿ ಯುವತಿ ತಾಯಿ ನೋಡಿದಾಗ ಚಿನ್ನಾಭರಣ ಕಾಣೆಯಾಗಿದ್ದು ಗೊತ್ತಾಗಿದೆ. ಮಗಳನ್ನು ವಿಚಾರಿಸಿದಾಗ ಎಲ್ಲವನ್ನು ಹೇಳಿದ್ದಾಳೆ. ನಂತರ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸದ್ಯ ಆರೋಪಿ ತೇಜಸ್‌ನನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿ ಮೂರುವರೆ ಲಕ್ಷ ಮೌಲ್ಯದ ಚಿನ್ನಾಭರಣ ಸೀಜ್ ಮಾಡಿದ್ದಾರೆ.
PublicNext
07/08/2024 12:09 pm