ಬೆಂಗಳೂರು: ಸಿಸಿಬಿ ಇನ್ಸ್ಪೆಕ್ಟರ್ ತಿಮ್ಮೇಗೌಡ ಸಾವಿನ ಸುತ್ತಾ ಹಲವು ಅನುಮಾನಗಳು ಎದ್ದಿವೆ. ಕೆಲವರು ವೈಯಕ್ತಿಕ ಕಾರಣ ಇರಬಹುದು ಅಂತ ಹೇಳಿದ್ರೆ ಕುಟುಂಬಸ್ಥರು ಹೈಫ್ರೋಫೈಲ್ ಕೇಸ್ ಕಾರಣ ಅಂತ ಆರೋಪ ಮಾಡಿದ್ರು. ಈ ಮಧ್ಯೆ ಹೈ ಫ್ರೋಫೈಲ್ ಕೇಸ್ ಅಂತ ಹೇಳಲಾಗ್ತಿರೊಪ ಕೇಸ್ ನಲ್ಲಿ ಇಗಾಗ್ಲೆ ಆರೋಪಿಗಳನ್ನ ಪೊಲೀಸ್ರು ಬಂಧಿಸಿದ್ರು. ಈ ಪ್ರಕರಣದಲ್ಲಿ ಪೊಲೀಸ್ರು ಮಾತಾಡಿರೋ ಆಡಿಯೋ ಇದೆ ಇದೇ ಆಡಿಯೋದಿಂದ ತಿಮ್ಮೇಗೌಡರು ಹೆದರಿದ್ರು ಅಂತ ಕೂಡ ಸುದ್ದಿ ಹರಿದಾಡಿತ್ತು. ಪೊಲೀಸ್ ಮೂಲಗಳ ಪ್ರಕಾರ ಅಂತಹ ಹೈಫ್ರೋಫೈಲ್ ಕೇಸ್ ಗೆ ಸಂಬಂಧಿಸಿದ ಯಾವೂದೇ ಆಡಿಯೋಗಳು ಇದುವರೆಗೂ ಬೆಳಕಿಗೆ ಬಂದಿಲ್ಲ. ಸದ್ಯ ಈ ಕೇಸ್ ಫೈಲ್ ಬಗ್ಗ ಹಿರಿಯ ಅಧಿಕಾರಿಗಳು ಗಮನ ಹರಿಸಿದ್ದಾರೆ. ತಿಮ್ಮೇಗೌಡ ಸಾವಿನ ಕುರಿತು ಕಗ್ಗಲಿಪುರ ಪೊಲೀಸ್ರು ಕೂಡ ತನಿಖೆ ಚುರುಕುಗೊಳಿಸಿದ್ದು, ತಿಮ್ಮೇಗೌಡರು ವಾಸವಿದ್ದ ಮನೆಯ ಮತ್ತು ಕಾರಿನಲ್ಲಿ ತಪಾಸಣೆ ನಡೆಸಿದ ಯಾವೂದಾದರು ಡೆತ್ ನೋಟ್ ಸಿಗಬಹುದು ಎಂದು ಪರೀಕ್ಷಿಸಿದ್ದಾರೆ.
PublicNext
07/08/2024 12:06 pm