ಬೆಂಗಳೂರು: ಗೃಹಿಣಿಯೊಬ್ಬಳು ಮದುವೆಯಾಗಿ ಎರಡೇ ವರ್ಷಕ್ಕೆ ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಬೆಂಗಳೂರಿನ ಆಡುಗೋಡಿಯಲ್ಲಿ ನಡೆದಿದೆ. ಈ ಫೋಟೋದಲ್ಲಿರೋ ಹುಡುಗಿ ಹೆಸರು ತನಿಷಾ ಚೌಧರಿ. ಇನ್ನೂ ಆಕೆಯ ಪಕ್ಕದಲ್ಲಿರೋ ಈತನ ಹೆಸರು ತರುಣ್ ಚೌಧರಿ. ಇಬ್ಬರು ರಾಜಸ್ಥಾನ ಮೂಲದವ್ರೇ. ತನಿಷಾ ಚೌಧರಿ ತಂದೆ ಹೈದರಾಬಾದ್ ನಲ್ಲಿದ್ದಾರೆ. 2022 ರಲ್ಲಿ ಮದುವೆಯಾಗಿದ್ದ ತನಿಷಾ ಚೌಧರಿ ಹಾಗೂ ತರುಣ್ ಚೌಧರಿ ಬೆಂಗಳೂರಿನ ಆಡುಗೋಡಿಯಲ್ಲಿ ವಾಸವಿದ್ರು.ತರುಣ್ ಚಿನ್ನದ ಅಂಗಡಿ ಇಟ್ಟುಕೊಂಡಿದ್ದರೆ ತನಿಷಾ ಗೃಹಿಣಿಯಾಗಿದ್ದಳು. ಆಗಸ್ಟ್ 4 ರಂದು ತರುಣ್ ಸಂಬಂಧಿಯೊಬ್ಬ ತನಿಷಾ ಚೌಧರಿ ತಂದೆ ಗಣಪತ್ ಚೌಧರಿಗೆ ಕರೆ ಮಾಡಿದ್ದ. ನಿಮ್ಮ ಮಗಳು ಮೆಟ್ಟಿಲು ಮೇಲಿಂದ ಬಿದ್ದಿದ್ದಾಳೆ.ಆಸ್ಪತ್ರೆಗೆ ದಾಖಲಿಸಿದ್ದೀವಿ ನೀವು ಬೇಗ ಬನ್ನಿ ಅಂದಿದ್ದ. ಆಸ್ಪತ್ರೆಗೆ ಬಂದು ನೋಡಿದಾಗ ಮಗಳ ಶವ ಕಂಡು ತಂದೆ ಕಂಗಾಲಾಗಿದ್ರು.
ಸದ್ಯ ತನಿಷಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಗಂಡನ ಕುಟುಂಬಸ್ಥರು ಹೇಳ್ತಿದ್ರೆ ಇದು ಆತ್ಮಹತ್ಯೆ ಅಲ್ಲ ವರದಕ್ಷಿಣೆಗಾಗಿ ನಡೆದ ಕೊಲೆ ಅನ್ನೋದಾಗಿ ತನಿಷಾ ಕುಟುಂಬಸ್ಥರು ಆರೋಪ ಮಾಡ್ತಿದ್ದಾರೆ.
ಘಟನೆ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ತನಿಷಾ ಗಂಡ ತರುಣ್ ಸೇರಿದಂತೆ 7 ಜನ ಕುಟುಂಬಸ್ಥರ ಮೇಲೆ ವರದಕ್ಷಿಣೆ ಕಿರುಕುಳ ಆರೋಪ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಪೊಲೀಸ್ರು ತನಿಖೆ ನಡೆಸ್ತಿದ್ದಾರೆ. ತನಿಖೆ ಬಳಿಕ ಇದು ಕೊಲೆನಾ ಅಥವಾ ಆತ್ಮಹತ್ಯೆನಾ ಅನ್ನೋದು ಗೊತ್ತಾಗಲಿದೆ.
PublicNext
06/08/2024 06:14 pm