ಹಾವೇರಿ: ಇದೇ ವರ್ಷ ಜನವರಿಯಲ್ಲಿ ನಡೆದಿದ್ದ ಹಾವೇರಿ ಜಿಲ್ಲೆ ಹಾನಗಲ್ ಹೊರವಲಯದ ಗ್ಯಾಂಗ್ ರೇಪ್ ಕೇಸ್ನ 19 ಆರೋಪಿಗಳಲ್ಲಿ 10 ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ತೀವ್ರ ಸಂಚಲನ ಮೂಡಿಸಿದ್ದ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ ರಾಜ್ಯಾದ್ಯಂತ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಈ ಪ್ರಕರಣ ಸಂಬಂಧ 19 ಆರೋಪಿಗಳನ್ನು ಹಾನಗಲ್ ಪೊಲೀಸರು ಬಂಧಿಸಿದ್ದರು. ಇದೀಗ ಗ್ಯಾಂಗ್ ರೇಪ್ ಕೇಸ್ನ 10 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ.
ಹೈಕೋರ್ಟ್ ಆರೋಪಿಗಳಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. 10 ಆರೋಪಿಗಳಿಗೆ 2 ಲಕ್ಷ ಶ್ಯೂರಿಟಿಗಳೊಂದಿಗೆ ಜಾಮೀನು ಮಂಜೂರಾಗಿದೆ. ಹಾಗೆಯೇ, ವಿಚಾರಣೆ ವೇಳೆ ನ್ಯಾಯಾಲಯದ ಮುಂದೆ ನಿಯಮಿತವಾಗಿ ಹಾಜರಿರಬೇಕು. ಸಾಕ್ಷಿಗಳಿಗೆ ಯಾವುದೇ ಬೆದರಿಕೆ ಹಾಕುವಂತಿಲ್ಲ ಎಂದು ಕೋರ್ಟ್ ಷರತ್ತು ನೀಡಿದೆ.
PublicNext
06/08/2024 03:59 pm