ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಹುಲ್ 'ಗಾಂಧಿ' ಅಲ್ಲ, ರಾಹುಲ್ ಖಾನ್ : ಬಿಸಿಬಿಸಿ ಚರ್ಚೆ..ವಿಡಿಯೋ ವೈರಲ್

ನವದೆಹಲಿ : ಪಾಕಿಸ್ತಾನದ ಚಾನಲ್‌ ಒಂದರಲ್ಲಿ ಮಾತನಾಡುತ್ತ ಅತಿಥಿಯೊಬ್ಬರು ರಾಹುಲ್‌ ಗಾಂಧಿ ಅವರ ಜಾತಿಯನ್ನು ಪ್ರಶ್ನಿಸಿದ್ದಾರೆ. ''ರಾಹುಲ್ ಹೇಗೆ ಗಾಂಧಿಯಾದರು? ರಾಹುಲ್ ಅವರು ನೆಹರೂ ಕುಟುಂಬದ ಕುಡಿ. ಇದು ನೆಹರೂ ವಂಶ. ಇವರೊಂದಿಗೆ ಗಾಂಧಿಯ ಹೆಸರು ಹೇಗೆ ಥಳುಕು ಹಾಕಿಕೊಂಡಿದೆ?'' ಎಂದು ಅವರು ಕೇಳಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗುತ್ತಿದೆ.

ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ರಾಹುಲ್ ಗಾಂಧಿ ಹೇಗೆ ಗಾಂಧಿಯಾದರು? ಇದು ನೆಹರೂ ಅವರ ಕುಟುಂಬ. ಇದು ನೆಹರೂ ರಾಜವಂಶ, ಹಾಗಾದರೆ ಗಾಂಧಿಯ ಹೆಸರು ಅವರೊಂದಿಗೆ ಹೇಗೆ ಸಂಬಂಧ ಹೊಂದಿತು? ನೆಹರೂ ಅವರ ಮಗಳು ಇಂದಿರಾ ಫಿರೋಜ್ ಖಾನ್ ಅವರನ್ನು ವಿವಾಹವಾದರು. ಫಿರೋಜ್ ಖಾನ್ ನವಾಬ್ ಖಾನ್ ಅವರ ಮಗ. ನೆಹರು ಸರ್ಕಾರವನ್ನು ನಡೆಸಬೇಕಾದಾಗ, ಮಹಾತ್ಮ ಗಾಂಧಿ ಇಂಗ್ಲೆಂಡ್‌ನಲ್ಲಿ ಅಫಿಡವಿಟ್‌ಗೆ ಸಹಿ ಹಾಕಿದರು, ಅದರಲ್ಲಿ ಫಿರೋಜ್ ಖಾನ್ ಗಾಂಧಿಯಾದರು.

ಫಿರೋಜ್ ಖಾನ್ ಅವರ ಮಗ ರಾಜೀವ್ ಕ್ರಿಶ್ಚಿಯನ್ ಮಹಿಳೆ ಸೋನಿಯಾ ಅವರನ್ನು ವಿವಾಹವಾಗಿದ್ದಾರೆ. ನಂತರ, ಸೋನಿಯಾ ಮತ್ತು ರಾಜೀವ್ ಅವರ ಮಗಳು ಪ್ರಿಯಾಂಕಾ ಕ್ರಿಶ್ಚಿಯನ್ ರಾಬರ್ಟ್ ಅವರನ್ನು ವಿವಾಹವಾದರು. ಅವರ ಮನೆಯಲ್ಲಿ ಮುಸ್ಲಿಂ-ಕ್ರಿಶ್ಚಿಯನ್-ಪಾರ್ಸಿ ಇದ್ದಾರೆ ಎಂದಿದ್ದಾರೆ.

ಸಂಸತ್‌ನಲ್ಲಿ ಮಾತನಾಡಿದ ಅನುರಾಗ್‌ ಠಾಕೂರ್‌, ದೇಶದಲ್ಲಿ ಜಾತಿಗಣತಿ ಬಗ್ಗೆ ತುಂಬ ಮಾತನಾಡುತ್ತಾರೆ. ಜಾತಿಗಣತಿಯನ್ನು ಲೋಕಸಭೆಯಲ್ಲಿ ಮಂಡಿಸುತ್ತೇವೆ ಎನ್ನುತ್ತಾರೆ. ಆದರೆ ಜಾತಿಗಣತಿ ಬಗ್ಗೆ ಮಾತನಾಡುವವರಿಗೇ ತಮ್ಮ ಜಾತಿ ಯಾವುದು ಎಂದು ಗೊತ್ತಿಲ್ಲ ಎಂದು ಟೀಕಿಸಿದ್ದರು. ಅನುರಾಗ್‌ ಠಾಕೂರ್‌ ಹೇಳಿಕೆಗೆ ರಾಹುಲ್‌ ಗಾಂಧಿ ಪ್ರತ್ಯುತ್ತರ ನೀಡಿ, ನೀವು ನನ್ನನ್ನು ಎಷ್ಟು ಅವಮಾನಿಸುತ್ತೀರೋ ಅವಮಾನಿಸಿ. ಆದರೆ ನಾವು ಸಂಸತ್‌ನಲ್ಲಿ ಜಾತಿಗಣತಿ ವಿಧೇಯಕ ಮಂಡಿಸುತ್ತೇವೆ ಎಂಬುದನ್ನು ನೀವು ಮರೆಯದಿರಿ ಎಂದು ಸವಾಲು ಹಾಕಿದ್ದರು.

Edited By : Nirmala Aralikatti
PublicNext

PublicNext

06/08/2024 03:32 pm

Cinque Terre

298.37 K

Cinque Terre

17