ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಆಗಿಸಿ ಬಾವಿಗೆ ಕಂಟಕ, ಕಸದ ರಾಶಿಯಿಂದ ತುಂಬಿ ದುರ್ವಾಸನೆ ಬೀರುತ್ತಿರುವ ಬಾವಿ

ಶಿಗ್ಗಾವಿ. ಶಿಗ್ಗಾವಿ ಪಟ್ಟಣದ ಹಳೆಪೇಟೆ ಓಣಿಯ ಆಗಿಸಿ ಬಾವಿ, ನೀರು ಬಿಟ್ಟು ಕಸದ ರಾಶಿ ಸಾರಾಯಿ ಬಾಟಲಿ, ಮಾಂಸ ಮೂಳೆಗಳು ಹಾಗೂ ಮುಸುರೆಯಿಂದ ತುಂಬಿದೆ.

ಆಗಸಿ ಬಾವಿ ಸುಮಾರು ವರ್ಷಗಳ ಕಾಲ ಶಿಗ್ಗಾವಿ ಜನರಿಗೆ ಬರಗಾಲದಲ್ಲಿ ಬಳಕೆಗೆ ನೀರು ಪೂರೈಕೆ ಮಾಡಿದ್ದು, ಇದು ಗಣೇಶ ವಿಸರ್ಜನೆಗೆ ಮೀಸಲಿಟ್ಟ ಬಾವಿ ಆಗಿದೆ. ಶಿಗ್ಗಾವಿಯ ಎಲ್ಲ ಮನೆಗಳ ಹಾಗೂ ಸಾರ್ವಜನಿಕ ಗಣಪತಿಗಳನ್ನು ಈ ಬಾವಿಯಲ್ಲಿ ವಿಸರ್ಜನೆ ಮಾಡುತ್ತಾರೆ. ಆದ್ರೆ ಈ ಬಾವಿ ಕಸದಿಂದ ತುಂಬಿ ದುರ್ವಾಸನೆ ಬೀರುತ್ತಿದೆ.

ಹಾವೇರಿ ಸಂಸದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಲವು ಬಾರಿ ಸ್ವಚ್ಛತೆ ಬಗ್ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಪುರಸಭೆ ಮುಖ್ಯಾಧಿಕಾರಿ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಆಗಿಸಿಬಾವಿ ಪುರಸಭೆ 2,4,5,8 ವಾರ್ಡ್ ಗಳ ಮಧ್ಯೆ ಬರುತ್ತದೆ. ಪುರಸಭೆ ಸದಸ್ಯರಿಗೆ ಗಮನಕ್ಕೆ ತಂದರೂ ಯಾರು ಕೂಡ ಇದರ ಬಗ್ಗೆ ಗಮನ ಹರಿಸುತ್ತಿಲ್ಲ.

ಬರಿ ಸ್ವಚ್ಛತೆ ಅಂತ ಮಾತಿನಲ್ಲಿ ಹೇಳುತ್ತಾ ಕರಪತ್ರ ಹಂಚಿಕೆ ಮಾಡಲಾಗಿದೆ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಬಾವಿ ಸ್ವಚ್ಛತೆ ಹಾಗೂ ಅದರ ಸಂರಕ್ಷಣೆಗೆ ಗಮನಹರಿಸುತ್ತಾರೋ ಇಲ್ಲವೋ ಎಂದು ಕಾದು ನೋಡಬೇಕಾಗಿದೆ

ಚನ್ನವೀರ ನೀರಲಗಿ, ಪಬ್ಲಿಕ್ ನೆಕ್ಸ್ಟ್, ಶಿಗ್ಗಾವ್

Edited By : Shivu K
PublicNext

PublicNext

05/08/2024 12:59 pm

Cinque Terre

24.21 K

Cinque Terre

0