ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಹೆಗ್ಗೇರಿಗೆ ಬಂತು ಯುಟಿಪಿ ಕಾಲುವೆ ನೀರು

ಹಾವೇರಿ: ಹಾವೇರಿ ಜಿಲ್ಲೆಯ ಅತಿದೊಡ್ಡ ಕೆರೆಗಳಲ್ಲಿ ಒಂದಾದ ಹೆಗ್ಗೇರಿ ಕೆರೆ ತುಂಬಿದರೆ ನಗರದ ನೀರಿನ ಭವಣೆ ನೀಗಿಸಬಹುದು. ಕೆರೆಯನ್ನು ಮಳೆಗಾಲದಲ್ಲಿ ತುಂಬಿಸಿಕೊಂಡರೆ ಮುಂದಿನ ಬೇಸಿಗೆ ಕಾಲದಲ್ಲಿ ಹಾವೇರಿಗರಿಗೆ ನೀರಿನ ಅಭಾವ ಕಾಣಿಸಿಕೊಳ್ಳುವುದಿಲ್ಲ. ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾಡಳಿತ ಪ್ರಸ್ತುತ ವರ್ಷ ಯುಟಿಪಿ ಕಾಲುವೆಯಿಂದ ಹಾವೇರಿ ಹೆಗ್ಗೇರಿಗೆ ನೀರು ಹರಿಸುತ್ತಿದೆ.

ಕಳೆದ ಕೆಲ ದಿನಗಳಿಂದ ಯುಟಿಪಿ ಕಾಲುವೆಯಿಂದ ಹೆಗ್ಗೇರಿ ಕೆರೆಗೆ ನೀರು ಹರಿದುಬರುತ್ತಿದ್ದು ದಿನದಿಂದ ದಿನಕ್ಕೆ ಹೆಗ್ಗೇರಿ ಮೈದುಂಬಿಕೊಳ್ಳಲಾರಂಭಿಸಿದೆ. ಈಗಾಗಲೇ ಪ್ರತಿಶತ 70 ರಷ್ಟು ಕೆರೆ ತುಂಬಿದ್ದು ಇನ್ನು ಕೆಲವೇ ದಿನಗಳಲ್ಲಿ ಕೆರೆ ಭರಪೂರ ತುಂಬಲಿದೆ. ಈ ಕೆರೆ ತುಂಬಿದರೆ ಸಾವಿರಾರು ಎಕರೆಯಲ್ಲಿ ರೈತರು ವರ್ಷದಲ್ಲಿ ಎರಡು ಬೆಳೆ ಬೆಳೆಯಬಹುದು. ಸುತ್ತಮುತ್ತಲ ಗ್ರಾಮಗಳ ಅಂತರ್ಜಲಮಟ್ಟ ಸುಧಾರಿಸುತ್ತದೆ. ಕೊಳವೆಬಾವಿಗಳು ರಿಚಾರ್ಜಾಗುತ್ತವೆ.

ಹಾವೇರಿ ನಗರಕ್ಕೆ ನೂತನವಾಗಿ ಜಾರಿಗೆ ತರಲಾಗಿರುವ ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಯೋಜನೆಗೆ ಸಹ ಹೆಗ್ಗೇರಿ ನೀರು ಬಳಸಬಹುದಾಗಿದೆ. ಹೆಗ್ಗೇರಿ ಪ್ರಾಣಿಪಕ್ಷಿಗಳಿಗೆ ಆಶ್ರಯವಾಗಿದ್ದು ದೂರ ದೂರದ ಬಾನಾಡಿಗಳು ತಮ್ಮ ಆಹಾರ ವಂಶಾಭಿವೃದ್ಧಿಗಾಗಿ ಕೆರೆಯನ್ನೇ ಆಶ್ರಯಿಸಿವೆ. ಕೆರೆಯ ಸಮೃದ್ಧಿಯಾಗಿ ತುಂಬಿದೆ ಹಾವೇರಿ ಇನ್ನಷ್ಟು ಸುಭೀಕ್ಷೆಯಾಗಲಿದೆ. ಜಿಲ್ಲಾಡಳಿತ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Ashok M
PublicNext

PublicNext

04/08/2024 10:20 am

Cinque Terre

32.23 K

Cinque Terre

0