ಬೆಂಗಳೂರು: ಅಪರಾಧ ಕೃತ್ಯಗಳನ್ನ ತಡೆಗಟ್ಟಲು ಸೇಫ್ ಸಿಟಿ ಪ್ರಾಜೆಕ್ಟ್ ನಡಿ ನಗರದಲ್ಲಿ 7.5ಸಾವಿರ ಸಿಸಿ ಕ್ಯಾಮೆರಾ ಅಳವಡಿಕೆಯಾಗಿದೆ. ಆದ್ರೆ ಇಷ್ಟು ದಿನ ರಸ್ತೆಯಲ್ಲಿ ಏನಾದ್ರೂ ಕ್ರೈಂ ಆದ್ರೆ ತಮ್ಮದೇ ಇಲಾಖೆಯಿಂದ ಸಿಸಿಟಿವಿ ವಿಡಿಯೋ ಪಡೆಯಲು ಪೊಲೀಸ್ರು ಕಷ್ಟಪಡಬೇಕಿತ್ತು. ಮೊದಲು ಕಮಾಂಡ್ ಸೆಂಟರ್ ಗೆ ರಿಕ್ವೆಸ್ಟ್ ನೀಡಿ ನಂತರ ದಿನಗಟ್ಟಲೆ ಕಾದು ಸಿಸಿಟಿವಿ ವಿಡಿಯೋ ಪಡೆಯಬೇಕಿತ್ತು. ಇದ್ರಿಂದ ಸುಖಾ ಸುಮ್ಮನೆ ಸಮಯ ವ್ಯರ್ಥವಾಗ್ತಿತ್ತು. ಇದ್ರಿಂದ ಕೆಲವೊಮ್ಮೆ ಪೊಲೀಸ್ರು ಈ ಸಿಸಿಟಿವಿ ಪಡೆಯಲು ಹಿಂದೇಟು ಹಾಕ್ತಿದ್ರು. ಆದ್ರೆ ಇನ್ಮುಂದೆ ಹೀಗಾಗಲ್ಲ. ಪೊಲೀಸರಿಗೆ ಅಂಗೈಗೆ ಸಿಸಿಟಿವಿ ವಿಡಿಯೋ ಜಸ್ಟ್ ಒಂದು ಮೆಸೇಜ್ ಮಾಡೋದ್ರಿಂದ ಸಿಗುತ್ತೆ.
ಇದು ಸೇಫ್ ಸಿಟಿ ಯೋಜನೆಯಿಂದ ಆಗಿರುವ ಮಹತ್ವದ ಯೋಜನೆಯಾಗಿದ್ದು, ಯಾವುದೇ ಅಪರಾಧ ಕೃತ್ಯವಾದ್ರೂ ಪೊಲೀಸರ ಮೊಬೈಲ್ ಗೆ ಬರಲಿದೆ ಸಿಸಿಟಿವಿ ವಿಡಿಯೋ. ಜಸ್ಟ್ ಒಂದು ಸಂದೇಶ ಕಳುಹಿಸಿದ್ರೆ ಸಿಸಿಟಿವಿ ವಿಡಿಯೋ ಸಿಗಲಿದೆ. ಇನ್ಮುಂದೆ ಆ್ಯಪ್ ಮೂಲಕ ಮೆಸೇಜ್ ಮಾಡಿದ್ರೆ 15 ನಿಮಿಷದ ವಿಡಿಯೋ ಲಭ್ಯವಾಗಲಿದೆ. ಫೀಲ್ಡ್ ಆಪರೇಷನ್ ಪ್ಲಾಟ್ ಫಾರ್ಮ್ ಆ್ಯಪ್ ಮೂಲಕ ಪೊಲೀಸರು ಮನವಿ ಸಲ್ಲಿಸಿದ್ರೆ ಕೆಲವೇ ನಿಮಿಷಗಳಲ್ಲಿ ವಿಡಿಯೋ ಅವರ ವಾಟ್ಸ್ ಅಪ್ ನಂಬರ್ ಗೆ ಬರಲಿದೆ.
PublicNext
24/07/2024 08:21 pm