ನೆಲಮಂಗಲ: ನಗರದಲ್ಲಿ ಬೈಕ್, ಆಟೋ, ಕಾರುಗಳಿಗೆ ವಿಶೇಷವಾದ ನಂಬರ್ ಕೀ ಚೈನ್ ಬಂದಿದೆ. ಇಲ್ಲಿ ಅದರ ಮಾರಾಟಕ್ಕೆ ಸಖತ್ ಬೇಡಿಕೆ ಇದೆ. ಅದೇನಪ್ಪಾ ಅದರಲ್ಲಿ ಅಂತಹ ಸ್ಪೆಷಲ್ ಅಂತೀರಾ..
ಹೌದು ದರ್ಶನ್ ಖೈದಿ ನಂಬರ್ 6106 ಆದ ಹಿನ್ನಲೆ ಬೆಂಗಳೂರು ಟಿ.ದಾಸರಹಳ್ಳಿಯ ನಟ ದರ್ಶನ್ ಅಭಿಮಾನಿ ರಾಜು ಎಂಬುವರು ಸಾವಿತ್ರಿ ಆರ್ಟ್ಸ್ ಅಂಗಡಿಯಲ್ಲಿ ಕೈಕೋಳವಿರೋ 6106 ಸಂಖ್ಯೆಯ ಕೀ ಚೈನ್ ಮಾರಾಟ ಮಾಡ್ತಿದ್ದಾರೆ. ಅದಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಇದಕ್ಕೆ ಅಭಿಮಾನ ಎನ್ನಬೇಕೋ ಅಥವಾ ಅಂಧಾಭಿಮಾನ ಎನ್ನಬೇಕೋ ಗೊತ್ತಿಲ್ಲ. ಒಬ್ಬ ವ್ಯಕ್ತಿ ಮೇಲೆ ಜನ್ರು ಒಂದು ಸಾರಿ ಅಭಿಮಾನವಿಟ್ರೆ ಹೇಗಿರುತ್ತೆ ಅನ್ನೋದಕ್ಕೆ ನಟ ದರ್ಶನ್ ಮೇಲೆ ಅಭಿಮಾನಿಗಳಿಟ್ಟ ಅಭಿಮಾನವೇ ಸಾಕ್ಷಿ, ಅದು ಒಳ್ಳೆಯದಾದ್ರು ಕೆಟ್ಟದ್ದಾದ್ರು ಸರಿ..
PublicNext
23/07/2024 12:19 pm