ನೆಲಮಂಗಲ: ಡ್ರಗ್ಸ್ ಇಟ್ಟಿದ್ದ ಲೊಕೇಶನ್ ಹುಡುಕಿಕೊಂಡು ಬಂದ ಇಬ್ಬರು ಯುವಕರಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗಾಣಿಗರಹಳ್ಳಿ ಗ್ರಾಮದಲ್ಲಿ ನೆಡೆದಿದೆ.
ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಹೊರರಾಜ್ಯದ ವಿದ್ಯಾರ್ಥಿಗಳು ಹೆಚ್ಚಾದ ಹಿನ್ನೆಲೆ ದಿನನಿತ್ಯ ಬೆಂಗಳೂರು ಹೊರವಲಯದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಅದೇ ರೀತಿ ಗಾಣಿಗರಹಳ್ಳಿ ಗ್ರಾಮದ ರಸ್ತೆಯ ಬಳಿ ಡ್ರಗ್ಸ್ ಲೊಕೇಶನ್ ಹಿಡಿದು ಬಂದ ಇಬ್ಬರು ಯುವಕರ ಮೇಲೆ ಅನುಮಾನಗೊಂಡು ಸ್ಥಳೀಯರು ವಿಚಾರಿಸಿದಾಗ ಸರಿಯಾದ ಪ್ರತಿಕ್ರಿಯೆ ನೀಡದ ಯುವಕರಿಗೆ ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಸ್ಥಳೀಯರು ಮೊಬೈಲ್ನಲ್ಲಿ ಅವರ ವಿಡಿಯೋ ಮಾಡುತ್ತಾ ಮುಖ ನೋಡಲು ಟಾರ್ಚ್ ಬೆಳಕು ಹರಿಸುತ್ತಿದ್ದಂತೆ ಮುಖ ಮುಚ್ಚಿಕೊಂಡು ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಪ್ರದೇಶದಲ್ಲಿ ದಿನ ನಿತ್ಯ ಡ್ರಗ್ಸ್ ಹಾವಳಿ ಹೆಚ್ಚಾಗುತ್ತಿದ್ದು ಯುವಕರು ಅಡ್ಡದಾರಿ ಹಿಡಿಯುತ್ತಿದ್ದರೆ. ಹೀಗಾಗಿ ಕಡಿವಾಣ ಹಾಕುವ ನಿಟ್ಟಿನಲ್ಲಿ ಸ್ಥಳೀಯರು ಪೊಲೀಸರಿಗೆ ಮನವಿ ಮಾಡಿದ್ದಾರೆ.
PublicNext
23/07/2024 11:47 am