ಬೆಂಗಳೂರು : ಇಂದು ಹೃದಯಾಘಾತದಿಂದ ನಮ್ಮನ್ನು ಅಗಲಿದ ಕನ್ನಡದ ಹೆಸರಾಂತ ಹಿರಿಯ ಲೇಖಕಿ ಡಾ.ಕಮಲಾ ಹಂಪನಾ ಅವರ ಕುರಿತು ಅವರನ್ನು ಹತ್ತಿರದಿಂದ ಬಲ್ಲವರಾದ ಸಾಹಿತ್ಯಿಕ ವಲಯದ ಗಣ್ಯರನೇಕರು ಕಮಲಾ ಹಂಪನಾ ಅವರ ವ್ಯಕ್ತಿತ್ವವನ್ನು ಹಾಡಿ ಹೊಗಳಿದ್ದಾರೆ. ಅವರೊಬ್ಬ ಮಾತೃ ಹೃದಯಿಯಾಗಿದ್ದರು. ಮನೆಗೆ ಕರೆದು ಪುಸ್ತಕ ಕೊಟ್ಟು ಹೊಟ್ಟೆ ತುಂಬ ಊಟ ಹಾಕಿ ನಮ್ಮನ್ನು ಕಳಿಸುತ್ತಿದ್ದರು ಅಂತಾ ಒಬ್ಬರೂ ಒಂದೊಂದು ರೀತಿಯಲ್ಲಿ ಸ್ಮರಿಸಿಕೊಂಡಿದ್ದಾರೆ.
ರವೀಂದ್ರ ಕಲಾಕ್ಷೇತ್ರದ ಬಳಿ ಇರುವ ಸಂಸ ರಂಗಮಂದಿರದಲ್ಲಿ ಡಾ.ಕಮಲಾ ಹಂಪನಾ ಅವರಿಗೆ ಅಂತಿಮ ನಮನ ಸಲ್ಲಿಸಿದ ಕಮಲಾ ಹಂಪನಾ ಅವರ ಶಿಷ್ಯ ಬಳಗ ಅವರೊಂದಿಗಿನ ಒಡನಾಟದ ಸವಿ ನೆನಪುಗಳನ್ನು ಪಬ್ಲಿಕ್ ನೆಕ್ಸ್ಟ್ ನೊಂದಿಗೆ ಮೆಲುಕು ಹಾಕಿದರು.
PublicNext
22/06/2024 09:58 pm