ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಅವರಲ್ಲಿ ಸಣ್ಣವರೊಂದಿಗೂ ಬೆರೆಯುವ ಗುಣವಿತ್ತು

ರವೀಂದ್ರ ಕಲಾಕ್ಷೇತ್ರ : ಅಷ್ಟೊಂದು ಹೆಸರು ಮಾಡಿದಂಥ ದೊಡ್ಡ ಲೇಖಕಿಯಾಗಿದ್ದರೂ ಕೂಡ ಸಣ್ಣವರೊಂದಿಗೂ ಅತ್ಯಂತ ಆತ್ಮೀಯವಾಗಿ ಬೆರೆಯುವ ವಿಶೇಷ ಗುಣ ಅವರಲ್ಲಿತ್ತು. ಅವರನ್ನು ನಾನು ಮರೆಯೋಕೇ ಸಾಧ್ಯವಿಲ್ಲ. ಇವತ್ತಿನ ಅದೆಷ್ಟೋ ಸಾಹಿತಿ ಬರಹಗಾರರಿಗೆ ಕಮಲಾ ಹಂಪನಾ ಅವರು ಆದರ್ಶಪ್ರಾಯರಾಗಿದ್ದಾರೆ. ಹೀಗಂತ ಲೇಖಕಿ ಹಾಗೂ ಕಮಲಾ ಹಂಪನಾ ಅವರ ಒಡನಾಡಿಯೂ ಆಗಿರುವ ಗೊರೂರು ಪಂಕಜ ಅವರು ಹೇಳಿದರು.

ಇಂದು ಬೆಳಗ್ಗೆ ವಿಧಿವಶರಾದ ಡಾ.ಕಮಲಾ ಹಂಪನಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಸಂಸ ರಂಗಮಂದಿರದಲ್ಲಿ ಪಬ್ಲಿಕ್ ನೆಕ್ಸ್ಟ್ ನೊಂದಿಗೆ ಮಾತನಾಡಿದ ಅವರು, ಕಮಲಾ ಮತ್ತು ಅವರ ಪತಿ ಹಂಪ ನಾಗರಾಜಯ್ಯ ಅವರು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಸಾಹಿತ್ಯ ರತ್ನಗಳು ಎಂದರು.

Edited By : Manjunath H D
PublicNext

PublicNext

22/06/2024 09:04 pm

Cinque Terre

65.97 K

Cinque Terre

0