ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಮಲಾ ಹಂಪನಾ ಅವರು ಹಿಂದೂ, ಜೈನ ಧರ್ಮಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರು!

ಕಮಲಾ ಹಂಪನಾ ಅವರು ಮೂಲತ: ನನ್ನ ತಾಲೂಕಿನವರು. ಅಂದರೆ, ಪಾವಗಡದವರು. ಬಡತನದಲ್ಲಿ ಹುಟ್ಟಿ ವಿದ್ಯಾಭ್ಯಾಸ ಮಾಡಿ ಮುಂದೆ ದೊಡ್ಡ ಲೇಖಕಿಯಾಗಿ ಹೆಸರು ಮಾಡಿದವರು. ತಮ್ಮ ವೈಚಾರಿಕತೆಯಿಂದಲೇ ಸಮಾಜದ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿದವರು. ಸಮ ಸಮಾಜ ನಿರ್ಮಾಣದ ಕನಸು ಕಂಡವರು. ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಸೇರಿದ ಮತ್ತು ಇಷ್ಟೊಂದು ಎತ್ತರಕ್ಕೆ ಏರಿದ ಮತ್ತೊಬ್ಬ ಮಹಿಳೆ ಈ ದೇಶದಲ್ಲೇ ಇಲ್ಲ.

ಹೀಗಂತ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಅವರು ಹೇಳಿದರು.

ಇಂದು ವಿಧಿವಶರಾದ ಕಮಲಾ ಹಂಪನಾ‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಿದ ಬಳಿಕ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಪಬ್ಲಿಕ್ ನೆಕ್ಸ್ಟ್ ನೊಂದಿಗೆ ಮಾತನಾಡಿದ ಅವರು, ವೈಚಾರಿಕತೆಯಿಂದ ಸಮಾಜದ ಸಮಸ್ಯೆಗಳಿಗೆ ಕಮಲಾ ಹಂಪನಾ ಅವರು ಪರಿಹಾರ ಒದಗಿಸಿದವರು ಎಂದರು.

Edited By : Suman K
PublicNext

PublicNext

22/06/2024 08:32 pm

Cinque Terre

53.77 K

Cinque Terre

0