ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಧೂಮಪಾನ ಮಾಡುವ ಯುವತಿಯರ ಸಂಖ್ಯೆ ಹೆಚ್ಚಳ.!

ಬೆಂಗಳೂರು: ರಾಜ್ಯದಲ್ಲಿ ಧೂಮಪಾನ ಮಾಡುವ ಮಹಿಳೆಯರ ಸಂಖ್ಯೆ ದುಪ್ಪಟ್ಟಾಗಿದೆ. ಪರಿಣಾಮ ವರ್ಷದಿಂದ ವರ್ಷಕ್ಕೆ ಯುವತಿಯರನ್ನು ಕ್ಯಾನ್ಸರ್ ಹೆಚ್ಚಾಗಿ ಕಾಡುತ್ತಿದೆ. ಧೂಮಪಾನ ಹೆಚ್ಚಳದ ಬಗ್ಗೆ ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆನಲ್ಲಿ ಉಲ್ಲೇಖ ಮಾಡಲಾಗಿದೆ.

ಸರ್ವೇ ಪ್ರಕಾರ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ದಾವಣಗೆರೆ ನಂತಹ ಮಹಾನಗರಗಳಲ್ಲಿ ಧಮ್ ಹೊಡೆಯುವ ಯುವತಿಯರ ಸಂಖ್ಯೆ ಹೆಚ್ಚಳವಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಶೇಕಡಾ 8 ರಷ್ಟು ಧಮ್ ಹೊಡೆಯುವ ಯುವತಿಯರ ಸಂಖ್ಯೆ ಹೆಚ್ಚಳವಾಗಿದ್ದು, ಈ ಪೈಕಿ 13-18 ವರ್ಷದೊಳಗಿನ ಹೆಣ್ಣುಮಕ್ಕಳಲ್ಲಿ ಧೂಮಪಾನದ ಪ್ರಮಾಣ ಡಬಲ್ ಆಗಿದೆ. ಹರಿಹರೆಯದ ಹುಡುಗಿಯರಲ್ಲಿ ಧೂಮಪಾನ ಪ್ರಮಾಣ ದುಪ್ಪಟ್ಟು ಆಗ್ತಿದ್ದು 2019ರ ವರೆಗೆ ಯುವತಿಯರಲ್ಲಿ ಧೂಮಪಾನ ಪ್ರಮಾಣ ಶೇಕಡಾ 3ರಷ್ಟಿತ್ತು. 2024ರಲ್ಲಿ ಯುವತಿಯರ ಧೂಮಪಾನ ಪ್ರಮಾಣ ಶೇಕಡಾ 8ಕ್ಕೆ ಏರಿಕೆಯಾಗಿದೆ.

ಈ ಬಗ್ಗೆ ತಜ್ಞ ವೈದ್ಯರ ಕೇಳಿದ್ರೆ ಹಲವು ಕಾರಣಗಳು ಹೇಳ್ತಾ ಹೋಗ್ತಾರೆ. ಉದ್ವೇಗ ತಡೆಯಲು ಹಾಗೂ ಸಮಾಧಾನ ಹೊಂದುವುದಕ್ಕೆ ಕೆಲಸದ ಒತ್ತಡ, ಇನ್ನಿತರ ಒತ್ತಡಕ್ಕೆ ಮಣಿದು ಧೂಮಪಾನ ಮಾಡುವವರ ಸಂಖ್ಯೆ ಹೆಚ್ಚಳವಾಗಿದೆ. ಫ್ಯಾಶನ್‌ಗಾಗಿ ಧಮ್ ಹೊಡೆಯುವವರ ಸಂಖ್ಯೆಯಲ್ಲೂ ಹೆಚ್ಚಳ ಆಗಿದೆಯಂತೆ.

Edited By : Somashekar
PublicNext

PublicNext

20/06/2024 04:11 pm

Cinque Terre

26.02 K

Cinque Terre

0

ಸಂಬಂಧಿತ ಸುದ್ದಿ