ಮಾಸ್ಕ್ ಹಾಕದವರಿಗೆ 10 ತಾಸು ಬಂಧನ...!?

ಮಾಸ್ಕ್ ಹಾಕದವರಿಗೆ ಬುದ್ಧಿ ಹೇಳಿ ಹೇಳಿ, ದಂಡ ಹಾಕಿ ಹಾಕಿ ಪೊಲೀಸ್ರು ಹೈರಾಣಾಗಿ ಹೋಗಿದ್ದರೆ. ಬೇಸತ್ತ ಪೊಲೀಸರು ಕೊನೆಗೆ ಒಂದು ಪ್ರಯೋಗಕ್ಕೆ ಇಳಿದಿದ್ದಾರೆ. ಅದೇನಂದ್ರೆ ಮಾಸ್ಕ್ ಹಾಕದೇ ಉಡಾಫೆ ತೋರುವವರಿಗೆ 10 ತಾಸು ಬಂಧನದ ಶಿಕ್ಷೆ

ದೆಹಲಿ ಪೊಲೀಸರು ಈಗಾಗಲೇ ಈ ಕ್ರಮ ಜಾರಿಗೊಳಿಸಿದ್ದಾರೆ. ಮಾಸ್ಕ್ ಹಾಕದವರನ್ನು ಹಿಡಿದು ಹೀಗೆ ಪೊಲೀಸ್ ವಾಹನದಲ್ಲಿ 10 ತಾಸು ಕೂಡಿ ಹಾಕುತ್ತಿದ್ದಾರೆ. ಒಂದು ನಿಮಿಷವೂ ನಿಂತಲ್ಲಿ ನಿಲ್ಲದೇ ಕೂತಲ್ಲಿ ಕೂರದೇ ಹಾಯಾಗಿ ಓಡಾಡಿಕೊಂಡಿದ್ದವರು ಈಗ ಪೊಲೀಸ್ ವಾಹನದಲ್ಲಿ ಸಿಕ್ಕು ತೊಳಲಾಡುತ್ತಿದ್ದಾರೆ. ಆದ್ರೆ ಇದಕ್ಕೆ ಪರ-ವಿರೋಧದ ಚರ್ಚೆಯೂ ಶುರುವಾಗಿದೆ. ಎಲ್ಲರನ್ನೂ ಒಂದೆಡೆ ಸೇರಿಸಿದ್ರೆ ಕೊರೊನಾ ಬರೋದಿಲ್ವಾ ಅಂತ ಕೆಲವರು ಹೇಳಿದ್ರೆ ಪೊಲೀಸರು ಸರಿಯಾಗಿಯೇ ಮಾಡಿದ್ದಾರೆ ಬಿಡಿ ಅಂತ ಕೆಲವರು ವಾದಿಸ್ತಿದ್ದಾರೆ. ಈ ವಿಡಿಯೋ ಈಗ ಎಲ್ಲ ಕಡೆ ವೈರಲ್ ಆಗಿದೆ.

Public News

Public News

5 months ago

Cinque Terre

34.89 K

Cinque Terre

5

 • Vishwanath Hubballi
  Vishwanath Hubballi

  ಹೆಲ್ಮೆಟ್ ಹಾಕದವರಿಗೂ ಈ ಶಿಕ್ಷೆ ವಿಧಿಸಲಿಕ್ಕೆ ಶುರು ಮಾಡಿ. ಶಿಕ್ಷೆಗೆ ಹೆದರಿಯಾದರೂ ಹೆಲ್ಮೆಟ್ ಹಾಕಿಕೊಂಡಾಗ, ಒಂದು ವೇಳೆ ಎಕ್ಸಿಡೆಂಟ್ ಆದರೇ ಎಷ್ಟೋ ಪ್ರಾಣಗಳು ಉಳಿಯುತ್ತವೆ. ಎಷ್ಟೋ ಕುಟುಂಬಗಳು ಅನಾಥವಾಗುವದು ತಪ್ಪುತ್ತದೆ. ಎಷ್ಟೋ ತಂದೆ ತಾಯಿ ತಮ್ಮ ಮಕ್ಕಳನ್ನು ಕಳೆದುಕೊಳ್ಳುವದು ತಪ್ಪುತ್ತದೆ.

 • naveen kumar
  naveen kumar

  ನಮ್ಮ ಬೈಕಂಪಾಡಿ ಯಲ್ಲಿ ಪೊಲೀಸ್ ನವರ ಎದುರಿಗೇ ಮಾಸ್ಕ್ ಹೆಲ್ಮೆಟ್ ಇಲ್ಲದೇ ಏಕ ಮುಖ ಹೆದ್ದಾರಿಯಲ್ಲಿ 3 ಜನರು ವಿರುದ್ಧ ದಿಕ್ಕಿನಲ್ಲಿ ದ್ವಿಚಕ್ರ ವಾಹನದಲ್ಲಿ ವೇಗವಾಗಿ ಚಲಿಸಿದರೆ ಕೂಡಾ ಯಾವ ಕಾನೂನು ಕೂಡಾ ಇಲ್ಲ....! ಈ ಪೊಲೀಸ್ ನವರಿಗೆ ತಮ್ಮ ಹೊಟ್ಟೆ ಹಾಗೂ ಜೇಬು ತುಂಬಿದರೆ ಸಾಕು..... ನಾವು ರಸ್ತೆ ಧಾಟ ಬೇಕಾದರೆ ಪಡುವ ಕಷ್ಟ ನಮಗೆ ಮಾತ್ರ ಗೊತ್ತು....!!! (ಇಲ್ಲಿ ಹೆಸರಿಗೆ ಮಾತ್ರ ಒಂದು ಟ್ರಾಫಿಕ್ ಪೊಲೀಸ್ ಠಾಣೆ ಇದೆ)

 • B.R.NAYAK
  B.R.NAYAK

  ಮುಂಬೈ ಸ್ವಪ್ನ ನಗರಿ - ದೆಹಲಿ ಡೀಲ್ ವಾಲೊಂಕ ನಗರಿ, ಆಗಿದೆ.ಹೆಸರು ಸೂಚಿಸಿದಂತೆ ಒಂದಕೊಂದು ಹತ್ತಿರದ ಸಂಭಂದ ಎರಡು ರಾಜ್ಯಗಳ ಕತೆ ಒಂದೇ,ಸಿಎಂ ಗಳನ್ನ ನೋಡಿ ಇಬ್ಬರೂ **!ಪಪ್ಪು ಗಳೇ** ಇವರಿಗೆ ಕುರ್ಚಿ ಬಿಟ್ಟರೆ ರಾಜಕೀಯ - ಆಡಳಿತದ ಗಂಧ - ಗಾಳಿ ಗೊತ್ತೇ ಇಲ್ಲ,ಹೌದು ಬಸವ ಎನ್ನುವವರೇ. ಇವಾಗ ಎಚ್ಚೆತ್ತ ಆಡಳಿತ,ಪೊಲೀಸರ ಕ್ರಮ ಅನೀರ್ವಾರ್ಯ,ಅಗತ್ಯ ಕೂಡ.ಉದಾಸೀನ ದ ವಾನರ ಕೋಡಂಗಿ ಗಳಿಗೆ ಬುದ್ಧಿ ಕಲಿಸುವ ಪಾಠ.

 • Basavaraj vastrad
  Basavaraj vastrad

  ದೇಶದ ಎಲ್ಲಾ ರಾಜ್ಯಗಳ ಲ್ಲೂ ಈ ರೀತಿ ಮಾಡಿ

 • sheku
  sheku

  good public news 👌👌