ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ : ದ.ಕ. ಜಿಲ್ಲೆಯಲ್ಲಿ ಭಾನುವಾರ 196 ಸೋಂಕು ಪ್ರಕರಣ ದೃಢ : ಸೋಂಕಿತರ ಸಂಖ್ಯೆ 2,230ಕ್ಕೇರಿಕೆ

ಮಂಗಳೂರು, ಜು.12: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಮಹಾಮಾರಿ ನಾಗಾಲೋಟದಲ್ಲಿ ಸಾಗಿದ್ದು, ರವಿವಾರ ಮತ್ತೆ 196 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲೆಯಲ್ಲಿ ಅತಿಹೆಚ್ಚು ಕೊರೋನ ಸೋಂಕಿನ ಪ್ರಕರಣ ಕಂಡು ಬಂದಿರುವುದರಲ್ಲಿ ರವಿವಾರ ದಾಖಲೆ ನಿರ್ಮಿಸಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 2,230ಕ್ಕೆ ಏರಿಕೆಯಾಗಿದೆ. 94 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ.

ಸೋಂಕಿತರ ಪೈಕಿ 20 ಪ್ರಾಥಮಿಕ ಸಂಪರ್ಕಿತರು, ಐಎಲ್‌ಐ 91, ಎಸ್‌ಎಆರ್‌ಐ 16, ವಿದೇಶದಿಂದ ಆಗಮಿಸಿದ್ದ 10, ಕಾಂಟ್ಯಾಕ್ಟ್ ಅಂಡರ್ ಟ್ರೇಸಿಂಗ್ 57, ಪ್ರೀ-ಡೆಲಿವರಿ ಸ್ಯಾಂಪಲ್‌ನ ಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.

ಎಲ್ಲ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

Kshetra Samachara

Kshetra Samachara

4 years ago

Cinque Terre

23.67 K

Cinque Terre

0

ಸಂಬಂಧಿತ ಸುದ್ದಿ