A PHP Error was encountered

Severity: Warning

Message: count(): Parameter must be an array or an object that implements Countable

Filename: controllers/Users.php

Line Number: 1814

Backtrace:

File: /var/www/html/website/publicnextwebsite/application/controllers/Users.php
Line: 1814
Function: _error_handler

File: /var/www/html/website/publicnextwebsite/index.php
Line: 316
Function: require_once

ಕಿನ್ನಿಗೋಳಿಯಲ್ಲಿ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ

ಕಿನ್ನಿಗೋಳಿಯಲ್ಲಿ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ

ಮುಲ್ಕಿ: ಇತ್ತೀಚಿಗೆ ಭಾರತ-ಚೀನಾದ ಲಡಾಕ್ ಗಲ್ವಾಮ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಭಾರತದ ಓರ್ವ ಸೈನ್ಯಾಧಿಕಾರಿ ಸೇರಿ 20 ಸೈನಿಕರು ಹುತಾತ್ಮರಾದ ಹಿನ್ನಲೆಯಲ್ಲಿ ಭಾರತಾಂಬೆಯ ಪುತ್ರರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಕಿನ್ನಿಗೋಳಿಯ ಜೆ. ಬಿ ಫ್ರೆಂಡ್ಸ್ ಕ್ಲಬ್ ವತಿಯಿಂದ ನಡೆಯಿತು ಕಿನ್ನಿಗೋಳಿ ಮುಖ್ಯರಸ್ತೆಯಲ್ಲಿ ಮೊಂಬತ್ತಿ ಗಳನ್ನು ಬೆಳಗಿಸಿ ಶ್ರದ್ಧಾಂಜಲಿ ಸಭೆಯನ್ನು ನಡೆಸಲಾಯಿತು.

ಜೆ. ಬಿ ಫ್ರೆಂಡ್ಸ್ ಕ್ಲಬ್ ನ ಗೌರವಾಧ್ಯಕ್ಷರಾದ ವಿನ್ಸೆಂಟ್ ಡಿಕೋಸ್ತ ರವರು ಹುತಾತ್ಮರ ನುಡಿನಮನ ಸಲ್ಲಿಸಿ, ಈ ದೇಶದಲ್ಲಿ ಹುಟ್ಟಿದ ನಾವೆಲ್ಲರೂ ಪುಣ್ಯವಂತರು, ಜಾತಿ, ಮತ, ಪಂಥ ಮರೆತು ಎಲ್ಲರು ಒಟ್ಟಾಗಿ ಶಾಂತಿ ಸಮಾಧಾನ ಸಂತೋಷದಿಂದ ಬದುಕುವ ಪಣ ತೊಡಬೇಕು , ಸ್ವದೇಶಿ ವಸ್ತುಗಳನ್ನು ಬಳಸಿ, ಸೈನಿಕರ ಕಲ್ಯಾಣ ನಿಧಿಗೆ ಸಹಾಯ ನೀಡಿ, ನಮ್ಮ ದೇಶಕ್ಕೆ ಗೌರವ ಸಲ್ಲಿಸೋಣ' ಎಂದರು.

ಅಧ್ಯಕ್ಷ ರಾದ ಸಂತೋಷ್ ಶೆಟ್ಟಿ ಯವರು ಭಾರತ ಮಾತೆಗೆ ಜೈಕಾರ ಕೂಗಿದರು. ಕಾರ್ಯದರ್ಶಿ ಶ್ರೀ ನಿಶಾನ್ ಕ್ವಾಡ್ರಸ್ ವಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಿನ್ನಿಗೋಳಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ರವೀಂದ್ರ ದೇವಾಡಿಗ, ಶ್ರೀ ನಿತ್ಯಾನಂದ ರಾವ್ , ಟ್ರಾಫಿಕ್ ಪೋಲೀಸ್ ಸಿಬ್ಬಂದಿ, ಜೆ ಬಿ ಫ್ರೆಂಡ್ಸ್ ಸದಸ್ಯರಾದ ಶ್ರೀ ಗೋಪಾಲ್,ಶ್ರೀ ರೋನ್ಸನ್, ಶ್ರೀ ರೋಲ್ಫಿ, ಶ್ರೀ ರೊನಾಲ್ಡ್ ಡಿಕೋಸ್ತ, ಶ್ರೀ ರೊನಾಲ್ಡ್ ಡಿಸೋಜ ಭಾಗವಹಿಸಿದರು.

Kshetra Samachara

Kshetra Samachara

12 days ago

Cinque Terre

4.68 K

Cinque Terre

0