ಕಡಬದಲ್ಲಿ ಕಾರು ಬೈಕ್ ನಡುವೆ ಅಪಘಾತ; ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿಗೇ ಮಾಸ್ಕ್ ಇಲ್ಲ..!

ಕಡಬ: ಕೊರೋನಾ ಅಟ್ಟಹಾಸದ ನಡುವೆ ಪೊಲೀಸ್ ಸಿಬ್ಬಂದಿಯೋರ್ವರು ಮಾಸ್ಕ್ ಧರಿಸದೇ ಕರ್ತವ್ಯ ನಿರ್ವಹಿಸುತ್ತಿರುವ ಘಟನೆ ಕಡಬದಲ್ಲಿ ನಡೆದಿದೆ.

ಕಡಬ ಪೇಟೆಯ ಮುಖ್ಯ ರಸ್ತೆಯಲ್ಲಿ ಕಾರು ಮತ್ತು ಬೈಕ್ ನಡುವೇ ಅಪಘಾತವೋಂದು ಸಂಭವಿಸಿತ್ತು. ವಾಹನ ಚಾಲಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಈ ಘಟನಾ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು, ಅಪಘಾತ ನಡೆದ ಸ್ಥಳಕ್ಕೆ ಕಡಬ ಪೋಲೀಸ್ ಠಾಣೆಯ ಸಿಬ್ಬಂದಿಯೋರ್ವರು ಮಾಸ್ಕ್ ಧರಿಸದೇ ಬಂದು ಜನರ ನಡುವೆ ನಿಂತಿದ್ದರು.

ಕೊರೋನಾ ಅತೀ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಈ ಸಂದರ್ಭದಲ್ಲಿ ಕಡಬ ಪೊಲೀಸ್ ಠಾಣಾಧಿಕಾರಿ ರುಕ್ಮ ನಾಯ್ಕ್ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸುವ ಮೂಲಕ ಕಡಬ ಪ್ರದೇಶದಲ್ಲಿ ಕೊರೋನಾ ಹರಡದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.ಆದರೂ ಕಡಬ ಠಾಣಾ ಸಿಬ್ಬಂದಿಯಿಂದಲೇ ಬೇಜಾವಾಬ್ದಾರಿ ವರ್ತನೆ ನಡೆದಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Kshetra Samachara

Kshetra Samachara

12 days ago

Cinque Terre

17.52 K

Cinque Terre

0