ಉಡುಪಿ: ಆಂಬುಲೆನ್ಸ್ ಚಾಲಕನಿಂದ ಕುಡಿದು ಅವಾಂತರ!

ಉಡುಪಿ: ನಾಳೆ ಸಿಗುತ್ತೋ ಇಲ್ಲವೋ ಇವತ್ತೇ ಫುಲ್ ಟೈಟ್ ಆದ ಆಂಬುಲೆನ್ಸ್ ಚಾಲಕ.ಈ ಪ್ರಕರಣ ನಡೆದಿರುವುದು ಉಡುಪಿ ಜಿಲ್ಲೆಯ ಬ್ರಹ್ಮಾವರದ ಉಪ್ಪೂರಿನಲ್ಲಿ.ಲಾಕ್ ಡೌನ್ ಮುನ್ನಾ ದಿನವಾದ ಇಂದು ಕಂಠಪೂರ್ತಿ ಕುಡಿದು ಚಾಲಕನೋರ್ವ ಆಂಬುಲೆನ್ಸ್ ಓಡಿಸಿದ್ದಾನೆ. ಪರಿಣಾಮವಾಗಿ ರಸ್ತೆ ಬಿಟ್ಟು ತೆಂಗಿನ ತೋಟಕ್ಕೆ ಆಂಬುಲೆನ್ಸ್ ನುಗ್ಗಿದೆ.
ಅದೃಷ್ಟವಶಾತ್ ಆಂಬುಲೆನ್ಸ್ ನಲ್ಲಿ ಯಾವುದೇ ರೋಗಿಗಳು ಇರಲಿಲ್ಲ. ಈತ ಮಾತನಾಡಲು ಆಗದಷ್ಟು ಕಂಠಪೂರ್ತಿ ಕುಡಿದಿದ್ದ ! ಬ್ರಹ್ಮಾವರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Kshetra Samachara

Kshetra Samachara

5 days ago

Cinque Terre

17.48 K

Cinque Terre

0