ಉಡುಪಿ; ನಗರದ ವಾಣಿಜ್ಯ ಸಂಕೀರ್ಣ ಮಳಿಗೆಗೆ ಬೆಂಕಿ ಆಕಸ್ಮಿಕ , ಲಕ್ಷಾಂತರ ನಷ್ಟ

ಉಡುಪಿ: ವಾಣಿಜ್ಯ ಸಂಕೀರ್ಣ ಮಳಿಗೆಗೆ ಆಕಸ್ಮಿಕ ಬೆಂಕಿ ತಗುಲಿದ ಲಕ್ಷಾಂತರ ನಷ್ಟ ಸಂಭವಿಸಿದ ಘಟನೆ ನಗರದ ಪಿಪಿಸಿ ಕಾಲೇಜು ರಸ್ತೆಯಲ್ಲಿ ನಡೆದಿದೆ. ಸಂಜೆ ವೇಳೆ ಮಳಿಗೆಗೆ ಆಕಸ್ಮಿಕ ಬೆಂಕಿ ತಗಲಿದ್ದು ಸ್ಥಳೀಯರ ಗಮನಕ್ಕೆ ಬಂದಿದೆ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ.ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು.

ಬೆಂಕಿ ತಗುಲಿದ ಮಳಿಗೆ ಹಾಗೂ ಪರಿಸರದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದು ಸ್ಥಳಕ್ಕೆ ಸುಮಾರು 4 ರಿಂದ 5 ಅಗ್ನಿಶಾಮಕ ದಳದ ವಾಹನಗಳಿಂದ ನೀರು ಸಿಂಪಡಿಸಿ ನಂದಿಸುವ ಪ್ರಯತ್ನ ನಡೆದಿದೆ.ಘಟನೆಯಿಂದ ಮಳಿಗೆಯಲ್ಲಿನ ಸಾಮಗ್ರಿಗಳು ಬೆಂಕಿಗಾಹುತಿಯಾಗಿರುವ ಸಾಧ್ಯತೆಯಿದ್ದು ಲಕ್ಷಾಂತರ ನಷ್ಟ ಉಂಟಾಗಿದೆ.

Kshetra Samachara

Kshetra Samachara

5 days ago

Cinque Terre

10.23 K

Cinque Terre

0