ಉಡುಪಿ : ಕಾಲ್ ರೆಕಾರ್ಡ್ ಮಾಡಿ ಹರಿಯಬಿಡುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ: ಜಿ.ಜಗಧೀಶ್

ಉಡುಪಿ : ಕುಂದಾಪುರ ತಾಲೂಕು‌ ಪಂಚಾಯತ್ ಸಭಾಂಗಣದಲ್ಲಿ ಉಡುಪಿ ಡಿಸಿ ಗರಂ ಆದ ಪ್ರಸಂಗ ನಡೆಯಿತು. ಕಿಡಿಗೇಡಿಗಳ ವಿರುದ್ಧ ಗರಂ ಆದ ಜಿಲ್ಲಾಧಿಕಾರಿ ಜಿ. ಜಗದೀಶ್ ,ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಕಾಲ್ ರೆಕಾರ್ಡ್ ಹರಿಯಬಿಡುವುದನ್ನು ಗಮನಿಸಿದ್ದೇನೆ.ಎಂಎಲ್ ಎ, ಎಂಪಿ,ಮತ್ತು ಅಧಿಕಾರಿಗಳಿಗೆ ಕರೆ ಮಾಡಿ ಸಂಭಾಷಣೆ ಮಾಡಿ ಅದನ್ನ ಸಾಮಾಜಿಕ ಜಾಲತಾಣದಲ್ಲಿ ಕೆಲವು ಕಿಡಿಗೇಡಿಗಳು ಹರಿಯಬಿಡುತ್ತಿದ್ದಾರೆ.ಈ ತರಹ ಯಾರೇ ಮಾಡಿದ್ರೂ ಸಹಿಸೋದಿಲ್ಲ.

ಬಾಂಬೆ ಡಾನ್ ತರ ಕಾಲ್ ಮಾಡಿ ಹೆದ್ರಿಸಿದ್ರೆ ಹೆದ್ರುವವರು ಯಾರು ಇಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದ್ರು.ನೀವು ಯಾರೆ ಆಗಿರಿ ನೀವು ಎಲ್ಲಿ ಇರಿ, ಇಂತಹ ಕಿಡಿಗೇಡಿ ಕೃತ್ಯ ಮಾಡಿದ್ರೆ ನಿಮಗೆ ಶಿಕ್ಷೆ ಕಾದಿದೆ. ನಾವು ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಕೊರೋನಾ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಸುಮ್ಮ ಸುಮ್ಮನೆ ಕರೆ ಮಾಡಿ ಅದನ್ನು ರೆಕಾರ್ಡಿಂಗ್ ಮಾಡಿ ಬಿಡುವ ಕೆಲಸ ಮಾಡಿದ್ರೆ ಎಚ್ಚರಿಕೆ.ಅಂತವರ ಮೇಲೆ ಪ್ರಕರಣ ದಾಖಲಿಸಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈ ಗೊಳ್ಳಲಾಗುವುದು ಎಂದು ಗುಡುಗಿದ್ರು.

Kshetra Samachara

Kshetra Samachara

5 days ago

Cinque Terre

11.19 K

Cinque Terre

0