ಉಡುಪಿಯಲ್ಲಿ ಮೇ 25ರಿಂದ ಮೇ. 30ರವರೆಗೆ ಉಚಿತ ಸಿಟಿ ಬಸ್ ಸೇವೆ

ಉಡುಪಿ: ಕೊರೊನಾ ಭೀತಿಯನ್ನು ದೂರ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಕಡಿಯಾಳಿ ಹಾಗೂ ಆಸರೆ ಚಾರಿಟೇಬಲ್ ಟ್ರಸ್ಟ್ನ ಮೂಲಕ ಮೇ 25 ರಿಂದ ಮೇ 30 ರ ವರೆಗೆ 7 ಮಾರ್ಗಗಳಲ್ಲಿ ಉಚಿತ ಸಿಟಿ ಬಸ್ ಸೇವೆಯನ್ನು ಆರಂಭಿಸಲಾಗುವುದೆಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಶನಿವಾರ ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಿಸಿದರು. ಲಾಕ್ಡೌನ್ ಸಡಿಲಿಕೆಯಾದ ಬಳಿಕ ಹೆಚ್ಚಿನ ಕಡೆಗಳಲ್ಲಿ ಕೆಲಸ ಕಾರ್ಯಗಳು ಆರಂಭಗೊಂಡಿದ್ದು, ಸಾರಿಗೆ ವ್ಯವಸ್ಥೆ ಇಲ್ಲದೇ ದುಪ್ಪಟ್ಟು ಹಣ ಕೊಟ್ಟು ಕೆಲಸಕ್ಕೆ ಹೋಗಬೇಕಾಗಿದೆ. ಅಲ್ಲದೇ ಸಮೂಹ ಸಾರಿಗೆ ಬಳಸುವುದರಿಂದ ಕೊರೊನಾ ಹರಡುತ್ತದೆ ಎನ್ನುವ ಭೀತಿಯೂ ಇದೆ. ಇದನ್ನೆಲ್ಲ ದೂರ ಮಾಡುವ ನಿಟ್ಟಿನಲ್ಲಿ ಒಂದು ವಾರಗಳ ಕಾಲ ಉಚಿತ ಬಸ್ ಸೇವೆಯನ್ನು ನೀಡಲು ಮುಂದಾಗಿದ್ದೇವೆ ಎಂದರು.

ಬೆಳಗ್ಗೆ 7 ರಿಂದ ಸಂಜೆವರೆಗೆ ಈ ಉಚಿತ ಬಸ್ ಸೇವೆ ಸಿಗಲಿದೆ. ಪ್ರತಿ ಬಸ್ಗೆ ಚಾಲಕನ ಸಂಬಳ ಸಹಿತ ಡೀಸೆಲ್ ಖರ್ಚಿಗೆ ಸುಮಾರು 5000 ರೂ. ಖರ್ಚು ಬರಲಿದ್ದು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಆಸರೆ ಚಾರಿಟೇಬಲ್ ಟ್ರಸ್ಟ್ನ ಮೂಲಕ ಭರಿಸುತ್ತೇವೆ. ಬಸ್ನಲ್ಲಿ ಕಂಡಕ್ಟರ್ ಇರುವುದಿಲ್ಲ. ಗಣೇಶೋತ್ಸವ ಸಮಿತಿ ಕಾರ್ಯಕರ್ತರು, ಸ್ಥಳೀಯ ಜನಪ್ರತಿನಿಧಿಗಳು ಸಹಕರಿಸುತ್ತಾರೆ ಎಂದರು.
ಪ್ರಾಯೋಗಿಕವಾಗಿ ಒಂದು ವಾರದ ಸಾರಿಗೆ ವೆಚ್ಚವನ್ನು ನಾವು ಭರಿಸುತ್ತೇವೆ. ಜೂ. 1 ರ ಬಳಿಕ ಸಿಟಿ ಬಸ್ ಓಡಾಟ ಹೆಚ್ಚಲಿದ್ದು, ಹಣ ತೆಗೆದುಕೊಳ್ಳಲಾಗುವುದೆಂದು ಮಾಹಿತಿ ನೀಡಿದರು.

ಚಲೋ ಟ್ರಾವೆಲ್ ಕಾರ್ಡ್
ನಗದು ರಹಿತ ವಹಿವಾಟು ಉತ್ತೇಜಿಸುವ ಸಲುವಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಉಡುಪಿ ಸಿಟಿ ಬಸ್ ಮಾಲೀಕರ ಸಂಘ ಮುಂಬೈಯ ಚಲೋ ಕಂಪನಿಯ ಮೂಲಕ ಚಲೋ ಟ್ರಾವೆಲ್ ಕಾರ್ಡ್ಯನ್ನು ಪ್ರಯಾಣಿಕರಿಗೆ ಪರಿಚಯಿಸಲಿದೆ.

ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಆಸರೆ ಚಾರಿಟೇಬಲ್ ಟ್ರಸ್ಟ್ನ ಮೂಲಕ ಒಂದು ವಾರಗಳ ಕಾಲ ನಡೆಯುವ ಉಚಿತ ಬಸ್ ಸೇವೆ ಸಂದರ್ಭ ಬರುವ ಪ್ರಯಾಣಿಕರಿಗೆ ಉಚಿತವಾಗಿ ನೀಡಲಾಗುವುದು. ಇದರಲ್ಲಿ ಮೇ 30 ರ ವರೆಗೆ ಉಚಿತವಾಗಿ ಪ್ರಯಾಣಿಸಬಹುದು. ಆ ಬಳಿಕ ಈ ಕಾರ್ಡ್ಗೆ ಪ್ರಯಾಣಿಕರೇ ರಿಚಾರ್ಜ್ ಮಾಡಿಕೊಳ್ಳಬೇಕು. ಒಮ್ಮೆ ರಿಚಾರ್ಜ್ ಮಾಡಿದರೆ ಹಣ ಮುಗಿಯುವ ತನಕ ಪ್ರಯಾಣಿಸಬಹುದೆಂದು ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು.

ಉಚಿತ ಬಸ್ ರೂಟ್ ಮ್ಯಾಪ್

ರೂಟ್ ನಂ. 1
ಮಲ್ಪೆ-ಗರಡಿಮಜಲು-ಸಂತೆಕಟ್ಟೆ-ಉಡುಪಿ ಸಿಟಿ
ಉಡುಪಿ ಸಿಟಿ-ಸಂತೆಕಟ್ಟೆ-ಗರಡಿ ಮಜಲು-ಮಲ್ಪೆ

ರೂಟ್ 2
ಅಲೆವೂರು-ಕೊರಂಗ್ರಪಾಡಿ-ಉಡುಪಿ ಸಿಟಿ-ಮಣಿಪಾಲ-ಡಿಸಿ ಕಚೇರಿ
ಉಡುಪಿ ಸಿಟಿ-ಡಯಾನಾ-ಅಲೆವೂರು

ರೂಟ್3
ಹೂಡೆ-ತೊಟ್ಟಂ-ಮಲ್ಪೆ-ಆದಿ ಉಡುಪಿ-ಅಜ್ಜರಕಾಡು-ಉಡುಪಿ ಸಿಟಿ-ಮಣಿಪಾಲ-ಪರ್ಕಳ
ಪರ್ಕಳ-ಉಡುಪಿ ಸಿಟಿ-ಆದಿ ಉಡುಪಿ-ಮಲ್ಪೆ-ತೊಟ್ಟಂ-ಹೂಡೆ

ರೂಟ್ 4
ಸಂಪಿಗೆನಗರ-ಕಡೆಕಾರು-ಅಂಬಲಪಾಡಿ-ಅಜ್ಜರಕಾಡು-ಉಡುಪಿ ಸಿಟಿ- ಮಣಿಪಾಲ-ಪರ್ಕಳ
ಪರ್ಕಳ-ಮಣಿಪಾಲ-ಉಡುಪಿ ಸಿಟಿ-ಅಜ್ಜರಕಾಡು-ಅಂಬಲಪಾಡಿ-ಸಂಪಿಗೆ ನಗರ.

ರೂಟ್ 5
ಪ್ರಗತಿನಗರ-ಮಣಿಪಾಲ-ಉಡುಪಿ-ದೊಡ್ಡಣಗುಡ್ಡೆ-ಪೆರಂಪಳ್ಳಿ ಚರ್ಚ್
ಪೆರಂಪಳ್ಳಿ ಚರ್ಚ್-ದೊಡ್ಡಣಗುಡ್ಡೆ-ಉಡುಪಿ-ಮಣಿಪಾಲ-ಪ್ರಗತಿನಗರ.

ರೂಟ್ 6
ಕಳತ್ತೂರು-ಸಂತೆಕಟ್ಟೆ-ಚೇರ್ಕಾಡಿ-ಪೇತ್ರಿ-ಬ್ರಹ್ಮಾವರ
ಬ್ರಹ್ಮಾವರ-ಪೇತ್ರಿ-ಚೇರ್ಕಾಡಿ-ಸಂತೆಕಟ್ಟೆ ಕಳತ್ತೂರು.

ರೂಟ್ 7
ಹೂಡೆ-ಕೆಮ್ಮಣ್ಣು-ಸಂತೆಕಟ್ಟೆ-ಅಂಬಾಗಿಲು-ಗುಂಡಿಬೈಲು-ಕಲ್ಸಂಕ-ಉಡುಪಿ ಸಿಟಿ
ಉಡುಪಿ ಸಿಟಿ-ಕರಾವಳಿ ಬೈಪಾಸ್-ನಿಟ್ಟೂರು-ಸಂತೆಕಟ್ಟೆ-ಕೆಮ್ಮಣ್ಣು-ಹೂಡೆ.

Kshetra Samachara

Kshetra Samachara

5 days ago

Cinque Terre

9.78 K

Cinque Terre

1

  • Hemaraju Amin
    Hemaraju Amin

    Very good initiatives ... hope there will be little challenge to maintain the distance.... but team is capable to do so... Good luck...