ಮಂಗಳೂರು; ಕೊರೊನಾ ಎಫೆಕ್ಟ್; ಈ ಬಾರಿ ರಂಜಾನ್ ಹಬ್ಬಕ್ಕೆ ಸುಗಂಧ ದ್ರವ್ಯದ ಪರಿಮಳವಿಲ್ಲ

ಮಂಗಳೂರು; ಕೊರೊನಾ ಸೋಂಕು ವಿವಿಧ ರಂಗಗಳಲ್ಲಿ ಸಾಕಷ್ಟು ಸಮಸ್ಯೆ ಉಂಟು ಮಾಡಿದೆ. ಅದೇ ರೀತಿ ಈ ಬಾರಿ ಕರಾವಳಿಯಲ್ಲಿ ರಂಜಾನ್ ಉಪವಾಸದ ಬಳಿಕ ನಡೆಯುವ ಈದುಲ್ ಫಿತ್ರ್ ಹಬ್ಬದ ಸಂಭ್ರಮವನ್ನು ಕಡಿಮೆ ಮಾಡಿದೆ.

ಈದುಲ್ ಫಿತ್ರ್ ಹಬ್ಬದ ದಿನ ಹೊಸ ಬಟ್ಟೆ , ಅದಕ್ಕೆ ಸುಗಂಧ ದ್ರವ್ಯ ( ಅತ್ತರ್ ) ಸಿಂಪಡಿಸುವುದು ಮುಸ್ಲಿಮರು ಹಿಂದಿನಿಂದಲೂ ಮಾಡುತ್ತಾ ಬಂದಿದ್ದಾರೆ. ಈ ಬಾರಿ ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಹೊಸ ಬಟ್ಟೆ ಖರೀದಿ ಇಲ್ಲ, ಜೊತೆಗೆ ಪರಿಮಳ ಬೀರುವ ಅತ್ತರ್ ಖರೀದಿ ಇಲ್ಲ. ಈ ಕಾರಣದಿಂದ ಅತ್ತರ್ ವ್ಯಾಪಾರ ಕೇಂದ್ರ ಬಿಕೋ ಅನ್ನುತ್ತಿದೆ. ಒಟ್ಟಿನಲ್ಲಿ ಕೊರೊನಾ ವೈರಸ್ ಈ ಬಾರಿಯ ಈದುಲ್ ಫಿತ್ರ್ ನ ಸಂಭ್ರಮಾಚರಣೆಗೆ ಅಡ್ಡಿಯಾಗಿದೆ.

Kshetra Samachara

Kshetra Samachara

5 days ago

Cinque Terre

7.64 K

Cinque Terre

0