ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಅವರು ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ಇಬ್ಬರು ಪುಟಾಣಿ ಅಭಿಮಾನಿಗಳ ಪ್ರಶ್ನೆಯಿಂದ ಕಕ್ಕಾಬಿಕ್ಕಿ ಆಗಿದ್ದಾರೆ.
ಎಂಟು ವರ್ಷದ ಅವಳಿ ಬಾಲಕಿಯರ ಪೈಕಿ ಓರ್ವ ಬಾಲಕಿ, ತುಣುಕುಗಳನ್ನು ಮರುಹೊಂದಿಸುವುದು ಹೇಗೆ ಎಂದು ಪ್ರಶ್ನಿಸಿದಳು. ವಿಶ್ವನಾಥ್ ಆನಂದ್ ಉತ್ತರಿಸಲು ಹೋದಾಗ ಅವಳು ಅಡ್ಡಿ ಪಡಿಸಿ, ಅಲ್ಲ. ತುಂಡುಗಳನ್ನು ಹೇಗೆ ಗಮನಸೆಳೆಯುವುದು ಎಂದು ಮರುಪ್ರಶ್ನಿಸಿದ್ದಾಳೆ. ಆ ಹುಡುಕಿ ಪ್ರಶ್ನೆಗೆ ಸ್ವತಃ ಚಾಂಪಿಯನ್ ಗೊಂದಲಕ್ಕೆ ಒಳಗಾಗಿ 'ನನಗೂ ಏನೂ ತಿಳಿದಿಲ್ಲ' ಎಂದು ಹೇಳಿದರು. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಈ ಪ್ರಸಂಗದ ವಿಡಿಯೋವನ್ನು ಟ್ವೀಟ್ ಮಾಡಿರುವ ವಿಶ್ವನಾಥ್ ಆನಂದ್ ಅವರು, "ಈ ದಿನದ ಪ್ರಶ್ನೆ!" ಎಂದು ಬರೆದುಕೊಂಡಿದ್ದಾರೆ.
PublicNext
01/08/2022 08:45 pm