ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜನೋತ್ಸವ ರದ್ದು ಮಾಡಿದ್ದು ಜನಾಕ್ರೋಶದ ಕಾರಣಕ್ಕೆ: ಕಾಂಗ್ರೆಸ್ ಲೇವಡಿ

ಬೆಂಗಳೂರು: ಜನಾಕ್ರೋಶಕ್ಕೆ ಮಣಿದ ಸರಕಾರ ಜನೋತ್ಸವ ಕಾರ್ಯಕ್ರಮ ರದ್ದು ಮಾಡಿದೆ. ಹೊರತಾಗಿ ಮೃತ ಪ್ರವೀಣ್ ಮೇಲಿನ ಗೌರವದಿಂದಲ್ಲ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ರಾಜ್ಯ ಕಾಂಗ್ರೆಸ್​ ತಮ್ಮ ಸರ್ಕಾರದ ವೈಫಲ್ಯಗಳೇ ಮುಖ್ಯಮಂತ್ರಿಗಳ ನಿದ್ದೆಗೆಡುವಂತೆ ಮಾಡಿದೆ. ಜನರಿಗೆ ನಿದ್ದೆಗೆಡುವಂತ ಆಡಳಿತ ನೀಡಿದಾಗ ಜನರೂ ಸರ್ಕಾರದ ನಿದ್ದೆಗೆಡಿಸುತ್ತಾರೆ ಎನ್ನಲು ಮಧ್ಯರಾತ್ರಿಯ ಪತ್ರಿಕಾಗೋಷ್ಟಿಯೇ ಸಾಕ್ಷಿ ಎಂದು ಕಾಂಗ್ರೆಸ್​ ಲೇವಡಿ ಮಾಡಿದೆ.

ಇನ್ನು ಮಧ್ಯರಾತ್ರಿಯ ಯೂಟರ್ನ್​ಗಳ ವೃತ್ತಾಂತಗಳು ಬಿಜೆಪಿ ಸರ್ಕಾರಕ್ಕೆ ಹೊಸದೇನೂ ಅಲ್ಲ. ಸರ್ಕಾರಿ ಕಚೇರಿಗಳಲ್ಲಿನ ಚಿತ್ರೀಕರಣ ವಿಷಯದಲ್ಲೂ ಸರ್ಕಾರ ಹೀಗೆಯೇ ಯೂಟರ್ನ್​ಗಾಗಿ ರಾತ್ರಿಯವರೆಗೂ ಕಾದಿತ್ತು. ಬಹುಶಃ ಈ ಸರ್ಕಾರಕ್ಕೆ ಜ್ಞಾನೋದಯವಾಗಲು ರಾತ್ರಿಯೇ ಆಗಬೇಕೇನೋ. ಜನೋತ್ಸವದ ಬದಲಾಗಿ ಜನಾಕ್ರೋಶದ ದರ್ಶನವಾಗಿದೆ ಈ ಸರ್ಕಾರಕ್ಕೆ ಎಂದು ಕಿಡಿಕಾರಿದೆ.

Edited By : Nagaraj Tulugeri
PublicNext

PublicNext

28/07/2022 03:25 pm

Cinque Terre

50.92 K

Cinque Terre

5

ಸಂಬಂಧಿತ ಸುದ್ದಿ