ಬೆಂಗಳೂರು: ಚುನಾವಣಾ ರಾಜಕೀಯದಿಂದ ಹಿಂದಕ್ಕೆ ಸರಿಯುವ ಬಿಜೆಪಿ ರಾಜ್ಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಿರ್ಧಾರ, ರಾಜ್ಯ ಬಿಜೆಪಿ ವಲಯದಲ್ಲಿ ಅಚ್ಚರಿ ಮತ್ತು ಸಂಚಲನ ಮೂಡಿಸಿದೆ. ತಮ್ಮ ರಾಜಕೀಯ ಕರ್ಮಭೂಮಿ ಶಿಕಾರಿಪುರದಿಂದ ಪುತ್ರ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ ಎನ್ನುವ ಘೋಷಣೆಯನ್ನೂ ಬಿಎಸ್‌ವೈ ಮಾಡಿದ್ದರು.
ಇನ್ನು ಇದೇ ವಿಚಾರವಾಗಿ ಇಂದು ಬೆಂಗಳೂರಲ್ಲಿ ಮಾತನಾಡಿದ ಯಡಿಯೂರಪ್ಪ, "ನಿನ್ನೆ ಶಿಕಾರಿಪುರದಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಸ್ಪರ್ಧೆ ಮಾಡಿ ಎಂದು ಒತ್ತಡ ಬಂತು. ಆ ಸಂದರ್ಭದಲ್ಲಿ ನಾನು ಈ ಬಾರಿ ಸ್ಪರ್ಧೆ ಮಾಡುವುದಿಲ್ಲ. ನನ್ನ ಬದಲಿಗೆ ಬಿ.ವೈ.ವಿಜಯೇಂದ್ರ ಸ್ಫರ್ಧೆ ಮಾಡುತ್ತಾರೆ. ಅವರಿಗೆ ನಿಮ್ಮ ಆಶೀರ್ವಾದ ಇರಲಿ ಎಂದೆ. ಈ ಹಿಂದೆ ಬಿ.ವೈ.ವಿಜಯೇಂದ್ರ ಹಳೆಯ ಮೈಸೂರು ಭಾಗದಲ್ಲಿ ಸ್ಫರ್ಧೆ ಮಾಡುವ ಕುರಿತಂತೆ ಚರ್ಚೆ ಆಗಿತ್ತು. ನಮ್ಮ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಹಾಗೂ ಜೆ.ಪಿ. ನಡ್ಡಾ ಅವರು, ಎಲ್ಲಿ ಅವಕಾಶ ಮಾಡಿಕೊಡುತ್ತಾರೋ, ಅಲ್ಲಿ ವಿಜಯೇಂದ್ರ ಸ್ಫರ್ಧೆ ಮಾಡುತ್ತಾರೆ. ಕಾರ್ಯಕರ್ತರ ಒತ್ತಡದಿಂದ ನಾನು ಹಾಗೇ ಹೇಳಿದ್ದೇನೆ ಎಂದಿದ್ದಾರೆ.
PublicNext
23/07/2022 06:39 pm