ಆನೇಕಲ್; ಸ್ಥಳೀಯ ಪಕ್ಷ ಹಾಗೂ ಭ್ರಷ್ಟಾಚಾರದ ವಿರುದ್ಧ ದ್ವನಿಯೆತ್ತುತ್ತಿರುವ ಪಕ್ಷ ಅಂತಲೇ ಕರೆಸಿಕೊಳ್ಳುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಜನಚೈತನ್ಯ ಯಾತ್ರೆಯನ್ನು ಕಳೆದ 5 ದಿನಗಳ ಹಿಂದೆ ಚಾಲನೆ ನೀಡಿದೆ.
ಇಂದು ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣಕ್ಕೆ ಜನಚೈತನ್ಯ ಯಾತ್ರೆ ತಲುಪಿದ್ದು ಆನೇಕಲ್ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು ಪತ್ರಿಕಾಗೋಷ್ಠಿಯಲ್ಲಿ ಕೆ ಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಪಾಲ್ಗೊಂಡಿದ್ದರು. ಕೆಆರ್ ಎಸ್ ಪಕ್ಷವನ್ನು ಬೆಂಬಲಿಸುವಂತೆ ಜನಸಾಮಾನ್ಯರಲ್ಲಿ ಮನವಿ ಮಾಡಲಾಯಿತು.
ಇನ್ನು ಅಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಮಾತನಾಡಿ ರಾಜಕೀಯ ಬಹಳಷ್ಟು ಪವಿತ್ರವಾಗಿದೆ ಆದರೆ ನಮ್ಮ ರಾಜ್ಯದಲ್ಲಿ ಅಧಿಕಾರ ದುರ್ವಿನಿಯೋಗವಾಗುತ್ತಿದೆ .ಇದು ನಮ್ಮ ರಾಜ್ಯಕ್ಕೆ ದೊಡ್ಡ ಗಂಡಾಂತರ.ಇನ್ನು ಕೆಆರ್ ಎಸ್ ಪಕ್ಷ ರಾಜ್ಯಾದ್ಯಂತ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದೆ.
2023ರ ಚುನಾವಣೆಯಲ್ಲಿ ಆಸೆ ಆಮಿಷಗಳನ್ನು ಒಡ್ಡುವ ನಾಯಕರು ಗೆಲ್ಲಬಾರದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತೇವೆ ಇದೇ ಉದ್ದೇಶಕ್ಕಾಗಿ ಜನಚೈತನ್ಯ ಯಾತ್ರೆಯನ್ನು ನಡೆಸಲಾಗುತ್ತಿದ್ದು ಮುಂದಿನ ಚುನಾವಣೆಯಲ್ಲಿ ಎಲ್ಲರೂ ಸಹ ಭ್ರಷ್ಟ ರಾಜಕಾರಣ ಮಾಡುವ ನಾಯಕರನ್ನು ಹಾಗೂ ಪಕ್ಷಗಳನ್ನು ಓಡಿಸಬೇಕಾಗಿದೆ ಎಂದು ರವಿಕೃಷ್ಣರೆಡ್ಡಿ ಜನಸಾಮಾನ್ಯರಿಗೆ ಮನವಿ ಮಾಡಿದ್ದಾರೆ.
ಇನ್ನು ಈಗಾಗಲೇ 45 ವಿಧಾನಸಭಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಕಡೆ ಆರ್ ಎಸ್ ಪಕ್ಷ ಘೋಷಣೆ ಮಾಡಿದ್ದು ಮುಂದಿನ ದಿನಗಳಲ್ಲಿ ಎಲ್ಲೆಡೆ ಅಭ್ಯರ್ಥಿಗಳನ್ನು ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.
Kshetra Samachara
29/04/2022 10:30 am