ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಣಪತಿ ಪೂಜೆಯಲ್ಲಿ ಈ 7 ವಿಷಯಗಳ ಬಗ್ಗೆ ತಿಳಿದಿರಿ

1. ಅಕ್ಷತೆ:

ಗಣಪತಿ ಬಪ್ಪನ ಆಶೀರ್ವಾದ ಪಡೆಯಲು ಪೂಜೆಯಲ್ಲಿ ಅಕ್ಷತೆ ಅರ್ಪಿಸಿ. ಅಕ್ಷತೆ ಗಣಪತಿ ಪೂಜೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ಆದರೆ ಅಕ್ಷತೆ ಮುರಿಯದಂತೆ ಎಚ್ಚರಿಕೆ ವಹಿಸಿ. ಗಣಪತಿಗೆ ಅಕ್ಷತೆ ಅರ್ಪಿಸುವ ಮೊದಲು ‘ಇದಮ್ ಅಕ್ಷತ ಗಣ ಗಣಪತಾಯ ನಮಃ’ ಎಂಬ ಮಂತ್ರವನ್ನು ಉಚ್ಚರಿಸಿ ಅರ್ಪಿಸಿ. ಒಣ ಅಕ್ಕಿ ನೀಡಲು ಮರೆಯಬೇಡಿ.

2. ಸಿಂಧೂರ

ಏಕದಂತನಿಗೆ ಪೂಜೆಯಲ್ಲಿ ಸಿಂಧೂರವನ್ನು ಅರ್ಪಿಸಿ. ಸಿಂಧೂರವನ್ನು ಶುಭವೆಂದು ಪರಿಗಣಿಸಲಾಗಿದೆ. ಅದರ ಬಳಕೆಯಿಂದ ಯಾವುದೇ ದುಷ್ಟಶಕ್ತಿ ಅಥವಾ ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುವುದಿಲ್ಲ. ಈ ಸಿಂಧೂರವನ್ನು ವಿಘ್ನ ವಿನಾಶಕ ಗಣಪತಿಗೆ ಅರ್ಪಿಸಿದಾಗ, ಅದು ಅತ್ಯಂತ ಶುಭ ಫಲಿತಾಂಶವನ್ನು ನೀಡುತ್ತದೆ.

3. ಗರಿಕೆ

ಗಣಪತಿಗೆ ಗರಿಕೆ ಎಂದರೆ ಅಚ್ಚು ಮೆಚ್ಚು. ಗಣಪತಿ ಪೂಜೆಯಲ್ಲಿ 21 ಗರಿಕೆ ಇಟ್ಟು ಗಣಪತಿಯನ್ನು ಆರಾಧಿಸಿದರೆ ಗಣಪತಿ ಹೆಚ್ಚು ಸಂತೋಷಗೊಳ್ಳುತ್ತಾನೆ. ಹಾಗಾಗಿ ಪೂಜೆಯಲ್ಲಿ ಇಪ್ಪತ್ತೊಂದು ಗರಿಕೆಯನ್ನು ಅರ್ಪಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ.

4. ಹೂವು

ಅಲಂಕಾರ ಪ್ರಿಯ ಗಣಪನಿಗೆ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗುತ್ತದೆ. ಗಣಪನಿಗೆ ಎಕ್ಕದ ಹೂವಿನ ಹಾರ ಮಾಡಿ ಅರ್ಪಿಸುವುದು ಶ್ರೇಷ್ಠ. ಹಳದಿ ಹೂವಿನಿಂದ ಅಲಂಕಾರ ಮಾಡುವುದರಿಂದ ಗಣಪತಿ ಬೇಗ ಒಲಿಯುತ್ತಾನೆ ಎಂದು ನಂಬಲಾಗಿದೆ.

5. ಮೋದಕ

ಗಣಪತಿ ಬಪ್ಪನ ಆರಾಧನೆಯಲ್ಲಿ ಎಲ್ಲಾ ರೀತಿಯ ಸಿಹಿತಿಂಡಿಗಳು ಮತ್ತು ಹಲವು ಬಗೆಯ ತಿಂಡಿಗಳನ್ನು ಪ್ರಸಾದದ ರೂಪದಲ್ಲಿ ಅರ್ಪಿಸಲಾಗುತ್ತದೆ. ಆದರೆ ಗಣಪತಿಗೆ ಮೋದಕ ಎಂದರೆ ಬಹಳ ಇಷ್ಟ. ಮೋದಕ ಇಲ್ಲದೆ ಗಣೇಶನ ಪೂಜೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ.

6. ಬಾಳೆಹಣ್ಣು

ಯಾವುದೇ ಪೂಜೆಯನ್ನು ಫಲವಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಗಣಪತಿ ಆರಾಧನೆಯಲ್ಲಿ ಬಾಳೆಹಣ್ಣನ್ನು ಅರ್ಪಿಸಿ.

7. ಶಂಖ

ಸನಾತನ ಸಂಪ್ರದಾಯದ ಪ್ರತಿ ಪೂಜೆಯಲ್ಲೂ ಶಂಖವನ್ನು ಖಂಡಿತವಾಗಿ ಬಳಸಲಾಗುತ್ತದೆ. ಗಣಪತಿ ಬಪ್ಪನ ಆರಾಧನೆಯನ್ನು ಶಂಖ ಚಿಪ್ಪು ಇಲ್ಲದೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಶಂಖ ಗಣಪತಿ ಬಪ್ಪಾಗೆ ತುಂಬಾ ಪ್ರಿಯ. ಅವನು ಕೂಡ ಒಂದು ಕೈಯಲ್ಲಿ ಶಂಖ ಧರಿಸಲು ಕಾರಣವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಗಣೇಶನ ಆರಾಧನೆಯಲ್ಲಿ ಶಂಖ ನಾದ ಮೊಳಗಿಸಿ ಭಕ್ತಿಯಿಂದ ಪೂಜಿಸಿ.

Edited By : Nirmala Aralikatti
PublicNext

PublicNext

07/09/2021 04:32 pm

Cinque Terre

22.05 K

Cinque Terre

0