ಬಳ್ಳಾರಿ: ನದಿಯಲ್ಲಿ ಈಜುತ್ತಿದ್ದಾಗ ಮೊಸಳೆ ದಾಳಿ ನಡೆಸಿದ ಪರಿಣಾಮ ರೈತ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ನಡೆದಿದೆ.
ನಿಟ್ಟೂರು ಗ್ರಾಮದ ರೈತ ವೀರೇಶ್ (38) ಮೃತ ದುರ್ದೈವಿಯಾಗಿದ್ದು, ನದಿಯಲ್ಲಿ ಈಜಿಕೊಂಡು ಕೃಷಿ ಚಟುವಟಿಕೆಗೆ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಬಂದ ಮೊಸಳೆ ವೀರೇಶ್ ಅವರ ಮೇಲೆ ದಾಳಿ ನಡೆಸಿದೆ.
ಮೊಸಳೆ ರೈತನ ತೊಡೆ ಭಾಗಕ್ಕೆ ಕಚ್ಚಿದ್ದು, ತೀವ್ರವಾಗಿ ಗಾಯಗೊಂಡಿದ್ದ ರೈತ ವೀರೇಶ್ ಅಸುನೀಗಿದ್ದಾರೆ. ಈ ಸಂಬಂಧ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
04/09/2021 03:26 pm