ದೆಹಲಿ: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್ ಉಗ್ರರರು ಅಫ್ಘನ್ ಲ್ಲಿ ನರಕ ಸೃಷ್ಠಿಸುತ್ತಿದ್ದಾರೆ. ಅಫ್ಘಾನಿಸ್ತಾನದ ಪ್ರತಿ ಮನೆಯಿಂದ ತಮಗೆ ಒಬ್ಬ ಹುಡುಗಿ ಬೇಕು ಎಂದು ಡಿಮ್ಯಾಂಡ್ ಮಾಡುತ್ತಾರೆ. ಒಂದು ವೇಳೆ ವಿರೋಧಿಸಿದರೆ ಅವರನ್ನು ಗುಂಡು ಹಾರಿಸಿ ಕೊಲ್ಲುತ್ತಾರೆ. ಇಲ್ಲಾ ಮಹಿಳೆಯರನ್ನು ಹೊತ್ತುಯ್ಯುತ್ತಾರೆ.
ಸದ್ಯ ಅಲ್ಲಿನ ಪರಿಸ್ಥಿತಿಯನ್ನು ಉಗ್ರರಿಂದ ತಪ್ಪಿಸಿಕೊಂಡ ಬಂದ ಮಹಿಳೆ ಹೇಳಿದ್ದು ಹೀಗೆ ತಾಲಿಬಾನ್ ಹೋರಾಟಗಾರರು ಮೃತದೇಹಗಳೊಂದಿಗೆ ಸೆಕ್ಸ್ ಮಾಡಿದ್ದರು ಎಂಬ ಆಘಾತಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಪೊಲೀಸ್ ಪಡೆಯಲ್ಲಿ ಕೆಲಸ ಮಾಡುತ್ತಿದ್ದ ಮುಸ್ಕಾನ್ ಕಳೆದ ವಾರ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನ ವಶಪಡಿಸಿಕೊಂಡ ನಂತರ ದೇಶದಿಂದ ಓಡಿ ಭಾರತಕ್ಕೆ ಬಂದಿದ್ದಾರೆ. ಜೀವಭಯದಿಂದ ದೇಶದಿಂದ ಪಾಲಾಯನ ಮಾಡಿದೆ ಎಂದು ಅವರು ಹೇಳಿದ್ದಾರೆ.
“ಅವರು (ತಾಲಿಬಾನಿಗಳು) ಮೃತ ದೇಹಗಳ ಮೇಲೂ ಅತ್ಯಾಚಾರ ಮಾಡುತ್ತಾರೆ. ಅವರು ಸತ್ತಿದ್ದಾರೋ ಅಥವಾ ಬದುಕಿದ್ದಾರೋ ಎಂದು ಅವರು ಹೆದರುವುದಿಲ್ಲ. ಇದನ್ನು ನೀವು ಊಹಿಸಬಲ್ಲಿರಾ?” ಎಂದು ಖಾಸಗಿ ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮುಸ್ಕಾನ್ ಹೇಳಿದರು.
ಉಗ್ರರು ಹುಡುಗಿಯನ್ನು ಕೊಡಿ ಎಂದು ಕೇಳುತ್ತಾರೆ ಇದಕ್ಕೆ ನಿರಾಕರಿಸಿದರೆ ಇಡೀ ಕುಟುಂಬವನ್ನು ಕೊಲ್ಲುತ್ತಾರೆ. 10-12 ವರ್ಷದ ಹುಡುಗಿಯನ್ನು ಕೂಡ ಎತ್ತಿಕೊಂಡು ಹೋಗುತ್ತಾರೆ.” ನಾವು ಬದಲಾಗಿದ್ದೇವೆ ಎಂದು ಮಾಧ್ಯಮಗಳ ಮುಂದೆ ತಾಲಿಬಾನ್ ಹೇಳುವುದು ಎಲ್ಲಾ ನೆಪ ಮಾತ್ರ ಎಂದಿದ್ದಾರೆ ಮುಸ್ಕಾನ್.
PublicNext
25/08/2021 05:14 pm