ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಡಿಜಿಟಲೀಕರಣ ಪ್ರಚಾರದ ಭಿತ್ತಿಪತ್ರದಲ್ಲಿ "ಕೈ" ಚಿಹ್ನೆ ಬಳಕೆ - ಶಾಸಕ ಶರಣಗೌಡ ಕಂದಕೂರ ವಿರೋಧ.!

ಯಾದಗಿರಿ: ಕಂದಾಯ ಇಲಾಖೆಯ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ರಮದ ಪ್ರಚಾರ ಪತ್ರಗಳಲ್ಲಿ ಹಸ್ತ ಇರುವ ಗುರುತಿನ ಚಿಹ್ನೆಯನ್ನು ರದ್ದುಗೊಳಿಸಬೇಕೆಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ವಿರೋಧ ವ್ಯಕ್ತಪಡಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡ ಕಂದಾಯ ಇಲಾಖೆಗಳ ದಾಖಲೆಗಳನ್ನು ಡಿಜಿಟಲೀಕರಣ ಕಾರ್ಯಕ್ರಮದಲ್ಲಿ ಹಸ್ತ ಚಿಹ್ನೆ ಜೊತೆಗೆ ಐದು ಬೆರಳುಗಳ ಮೇಲೆ ಸೌಲಭ್ಯಗಳಿದ್ದು, ಇದು ಒಂದು ಪಕ್ಷಕ್ಕೆ ಸೀಮಿತವಾದ ಪ್ರಚಾರ ಪತ್ರ ಎಂದು ಕಂಡುಬಂದಿರುತ್ತದೆ ಎಂದರು.

ಇನ್ನು ಖುದ್ದು ಯಾದಗಿರಿ ಜಿಲ್ಲಾಧಿಕಾರಿಗೆ ಫೋನಾಯಿಸಿ ಮಾತನಾಡಿದ ಶಾಸಕರು, ಇದಕ್ಕೆ ನನ್ನ ವಿರೋಧವಿದ್ದು,ಲಿಖಿತವಾಗಿ ಸರ್ಕಾರದ ಗಮನಕ್ಕೆ ತರುತ್ತೇನೆ. ಇದರ ಬಗ್ಗೆ ನೀವೂ ಕೂಡ ಗಮನಹರಿಸಬೇಕೆಂದು ಹೇಳಿದರು. ಇದಲ್ಲದೇ ಶಾಸಕ ಶರಣಗೌಡ ಕಂದಕೂರು ಅವರು ಭಿತ್ತಿಪತ್ರದಲ್ಲಿ ಹಸ್ತ ಚಿಹ್ನೆಯನ್ನು ರದ್ದುಗೊಳಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಕೂಡ ಬರೆದಿದ್ದಾರೆ.

ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್, ಯಾದಗಿರಿ

Edited By : Ashok M
PublicNext

PublicNext

11/01/2025 03:53 pm

Cinque Terre

23.8 K

Cinque Terre

0