ಬೆಂಗಳೂರು: ನವರಾತ್ರಿ ಸಂಭ್ರಮದಲ್ಲಿರುವ ರಾಜ್ಯದ ಜನರಿಗೆ ಕರೆಂಟ್ ಶಾಕ್ ತಟ್ಟಲಿದೆ. ಈಗಾಗಲೇ ಬೆಲೆ ಏರಿಕೆಯಿಂದ ಕಂಗಲಾಗಿರುವ ಜನರಿಗೆ ವಿದ್ಯುತ್ ಬಿಲ್ ದರ ಮತ್ತಷ್ಟು ಹೊರೆಯಾಗಲಿದೆ. ಯಾವಾಗಿಂದ ಕರೆಂಟ್ ಬಿಲ್ ಹೆಚ್ಚಾಗಲಿದೆ, ಎಷ್ಟು ಹೆಚ್ಚಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ.
ಅಕ್ಟೋಬರ್ 1ರಿಂದ ರಾಜ್ಯಾದ್ಯಂತ ಕರೆಂಟ್ ಬಿಲ್ ಹೆಚ್ಚಾಗಲಿದೆ. ಕಳೆದ ಏಪ್ರಿಲ್ ನಲ್ಲಿ ಬೆಸ್ಕಾಂನಿಂದ 30 ಪೈಸೆ ದರ ಹೆಚ್ಚಿಗೆ ಮಾಡಲಾಗಿತ್ತು. ಈಗ ಮತ್ತೆ ಪ್ರತಿ ಯುನಿಟ್‌ಗೆ 43 ಪೈಸೆ ಹೆಚ್ಚಾಗಲಿದ್ದು, ಈ ಪರಿಷ್ಕೃತ ದರ ಅಕ್ಟೋಬರ್‌ನಿಂದ ಮುಂದಿನ ವರ್ಷದ ಮಾರ್ಚ್ ವರೆಗೂ ಜಾಲ್ತಿಯಲ್ಲಿರಲಿದೆ.
ಕಲ್ಲಿದ್ದಲಿನ ದರ ಏರಿಕೆಯಾದ ಹಿನ್ನಲೆ ವಿದ್ಯುತ್ ಬಿಲ್ ದರವನ್ನ ಪರಿಷ್ಕರಣೆ ಮಾಡಬೇಕೆಂದು ಎಲ್ಲಾ ವಿದ್ಯುತ್ ನಿಗಮಗಳು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ವು. ಹೀಗಾಗಿ ನಿಯಮಗಳ ಪ್ರಸ್ತಾವನೆಗೆ ತಕ್ಕಂತೆ ದರ ಹೆಚ್ಚಿಗೆ ಮಾಡಲಾಗ್ತಾಯಿದೆ ಅಂತ ಬೆಸ್ಕಂ ಪತ್ರಿಕ ಪ್ರಕಟಣೆ ಹೊರಡಿಸಿದೆ.
ಯಾವ್ಯಾವ ನಿಗಮಗಳು ಎಷ್ಟೆಷ್ಟು ಪ್ರಸ್ತಾವನೆ ಸಲ್ಲಿಸಿದ್ವು, ಹಾಗೂ ಏರಿಕೆಯಾಗ್ತಾಯಿರುವ ದರ ಎಷ್ಟು ಅನ್ನೊದನ್ನ ನೋಡೊದಾದ್ರೆ
- ಬೆಸ್ಕಾಂನಿಂದ 80.04 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ - 43 ಪೈಸೆ ಹೆಚ್ಚಳ
- ಮೆಸ್ಕಾಂನಿಂದ 55.68 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ - 24 ಪೈಸೆ ಹೆಚ್ಚಳ
- ಸೆಸ್ಕಾಂನಿಂದ 70.61 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ - 30 ಪೈಸೆ ಹೆಚ್ಚಳ
- ಹೆಸ್ಕಾಂನಿಂದ 81.78 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ - 35 ಪೈಸೆ ಹೆಚ್ಚಳ
- ಜೆಸ್ಕಾಂನಿಂದ 57.96 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ - 34 ಪೈಸೆ ಹೆಚ್ಚಳ
ಇನ್ನೂ ಬೆಸ್ಕಾಂ ಸೇರಿದಂತೆ ವಿದ್ಯುತ್ ದರ ಏರಿಕೆಯ ಬಿಸಿ ಗ್ರಾಹಕರನ್ನು ಸುಡಲಿದೆ. ಪ್ರತಿ ಯೂನಿಟ್ ಗೆ 43 ರಿಂದ 24 ಪೈಸೆ ಹೆಚ್ಚಿಗೆ ಆಗುತ್ತಿದ್ದ, ನೂರು ಯುನಿಟ್ ವಿದ್ಯುತ್ ಬಳಕೆಗೆ 43 ರಿಂದ 24 ರೂಪಾಯಿ ಗ್ರಾಹಕರಿಗೆ ಹೊರೆ ಬೀಳಲಿದೆ. ಹೀಗಾಗಿ ವಿದ್ಯುತ್ ದರ ಏರಿಕೆಯ ವಿರುದ್ದ ಸಾರ್ವಜನಿಕರು ಅಸಮಧಾನ ಹೊರಹಾಕ್ತಿದ್ದಾರೆ.
PublicNext
25/09/2022 10:00 pm