ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತವಾಗಲಿದೆ. ಹೌದು. ಮಳೆ ಮತ್ತು ಗಾಳಿ ಬರ್ತಿರೋದ್ರಿಂದ ಮರಗಳು ಉರುಳಿ ಬೀಳ್ತಾ ಇವೆ. ಈ ಕಾರಣಕ್ಕೇನೆ ಬೆಸ್ಕಾಂ ವಿದ್ಯುತ್ ಕಡಿತಗೊಳಿಸಲು ಮುಂದಾಗಿದೆ.
ಜೂನ್-17 ಮತ್ತು 18 ರಂದು ಬೆಂಗಳೂರಿನ ಈ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ. ಬೆಂಗಳೂರಿನ ಜಯನಗರ ದಕ್ಷಿಣ ವಲಯ, ಉತ್ತರ ವಲಯ,ಪೂರ್ವ ವಲಯ,ಪಶ್ಚಿಮ ವಲಯದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಹೆಚ್ಚು ಕಡಿಮೆ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆವರೆಗೂ ಎರಡು ದಿನವೂ ವಿದ್ಯುತ್ ಕಡಿತೊಳ್ಳಲಿದೆ. ಆದರೆ, ಕೆಲವೊಂದು ಏರಿಯಾದಲ್ಲಿ 11 ರಿಂದ 3 ಗಂಟೆ ಇದ್ದು, ಇನ್ನು ಕೆಲವು ಕಡೆಗೆ ಬೆಳಗ್ಗೆ 10 ಗಂಟೆಯಿಂದ 7 ಗಂಟೆ ವಿದ್ಯುತ್ ಕಡಿತಗೊಳಿಸಲು ಬೆಸ್ಕಾಂ ನಿರ್ಧರಿಸಿದೆ.
PublicNext
17/06/2022 11:40 am