ಬೆಂಗಳೂರು: ರಾಜಧಾನಿಯ ಈ ವಾರ್ಡ್ ವಾಸಿಗರಿಗೆ ಕೆಲ ದಿನಗಳಿಂದ ನಿದ್ದೆಯೇ ಬರ್ತಿಲ್ಲ. ನಳ್ಳಿ ಯಲ್ಲಿ ನೀರು ಸರಿಯಾಗಿ ಬಾರದಿದ್ದರೂ ಬಿಲ್ ಮಾತ್ರ ಲಕ್ಷದ ಆಸುಪಾಸು ಬಂದಿರೋದು ಶಾಕ್ ನೀಡಿದೆ!
ಹೌದು. ನಗರದ ಜೋಗುಪಾಳ್ಯ ವಾರ್ಡ್ ನ ಬಹುತೇಕ ಬೀದಿಯ ಮನೆಗಳ ಕಾವೇರಿ ನೀರಿನ ಬಿಲ್ ಬೇಕಾಬಿಟ್ಟಿ ಹರಿದು ಬಂದಿದೆ.
ಇಲ್ಲಿನ ನಿವಾಸಿ ಸುನಿಲ್ ಕುಮಾರ್ ಎಂಬವರ ಮನೆಗೆ ಅಕ್ಟೋಬರ್ ತಿಂಗಳ ನೀರಿನ ಬಿಲ್ 78,889 ರೂ. ಬಂದಿದೆ! ಪ್ರತಿ ತಿಂಗಳು 2- 4 ಸಾವಿರ ರೂ. ಮಾತ್ರ ನೀರಿನ ದರ ಬರ್ತಿತ್ತಂತೆ.
ಇದೀಗ ಬೆಂಗಳೂರು ಜಲ ಮಂಡಳಿಯ ನೀರಿನ ಬಿಲ್ ನೋಡಿ ಅವರು ಶಾಕ್ ಆಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದ್ರೆ ಅಸಡ್ಡೆ ಉತ್ತರ ನೀಡ್ತಾರೆ ಎಂದು ಸುನಿಲ್ ದೂರಿದ್ದಾರೆ.
ಇನ್ನು, ಇವರಿಗಷ್ಟೇ ಅಲ್ಲದೆ ಪಕ್ಕದ ಬೀದಿಯ ವಿಜಯಲಕ್ಷ್ಮಿ , ನರಸಿಂಹಯ್ಯ, ಹೀಗೆ ಶೇ.80 ವಾರ್ಡ್ ನಿವಾಸಿಗರಿಗೆ ನೀರಿನ ಬಿಲ್ ದುಪ್ಪಟ್ಟು ಬಂದಿದೆ.
PublicNext
15/11/2021 05:08 pm