ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕುಂಭದ್ರೋಣ ಮಳೆಗೆ ಅಥಣಿ ರೈತರು ಕಂಗಾಲು !

ಅಥಣಿ: ಅಥಣಿ ತಾಲೂಕಿನಾದ್ಯಂತ ಕೆಲವು ಭಾಗದಲ್ಲಿ ಸುರಿದ ಕುಂಭದ್ರೋಣ ಮಳೆಗೆ ರೈತರು ತತ್ತರಿಸಿದ್ದಾರೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ‌ ಮಳೆಯಿಂದಾಗಿ ಕೃಷಿ ಜಮೀನುಗಳು‌ ಸಂಪೂರ್ಣ ಜಲಾವೃತವಾಗಿದ್ದು‌ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆ ನೀರು ಪಾಲಾಗಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ‌ ಕಕಮರಿ‌ ಭಾಗದಲ್ಲಿ ಸುರಿದ ಮಳೆಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಬೆಳೆದ ದ್ರಾಕ್ಷಿ ಹಾಳಾಗಿದೆ. ಕಷ್ಟಪಟ್ಟು ದ್ರಾಕ್ಷಿ ಬೆಳೆದಿದ್ದ ರೈತ ಈರಪ್ಪ ಶಿರಗುಪ್ಪಿ ಅವರ ಜಮೀನು‌ ಜಲಾವೃತ್ತಗೊಂಡು ತೊಂದರೆ ಅನುಭವಿಸಿದ್ದಾರೆ.

ಒಟ್ಟಿನಲ್ಲಿ‌ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಈ‌ ಮಳೆ ರೈತರಲ್ಲಿ ಆತಂಕ ಮೂಡಿಸಿದ್ದಂತೂ‌ ಸುಳ್ಳಲ್ಲ!

Edited By : Somashekar
PublicNext

PublicNext

06/08/2022 03:22 pm

Cinque Terre

58.63 K

Cinque Terre

1

ಸಂಬಂಧಿತ ಸುದ್ದಿ