ಇಡೀ ಮುಂಬೈ ನಗರಕ್ಕೆ ವಿದ್ಯುತ್ ಸರಬರಾಜು ಮಾಡುವ ಗ್ರಿಡ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಮುಂಬೈ ಕರೆಂಟ್ ಕೈಕೊಟ್ಟಿದೆ.
ಮುಂಬೈ ಮಹಾನಗರಾದ್ಯಂತ ವಿದ್ಯುತ್ ಸಂಪೂರ್ಣ ಸ್ಥಗಿತಗೊಂಡಿರುವ ಕಾರಣ ನಗರ ಸಂಚಾರದ ಜೀವನಾಡಿಯಾಗಿರುವ ಉಪನಗರ ರೈಲು ಸೇವೆ ಸ್ಥಬ್ದವಾಗಿದೆ.
ವಿದ್ಯುತ್ ಪೂರೈಕೆ ವ್ಯತ್ಯಯದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಅಂಧೇರಿ, ಬಾಂದ್ರಾ, ಕಂಡಿವಲಿ, ಮುಳುಂದ, ವಾಸಿ ಹಾಗೂ ಥಾಣೆ ಪ್ರದೇಶಗಳು ಹೆಚ್ಚು ಬಾಧಿತವಾಗಿದೆ.
ಅನೇಕರು ಏಕಾಏಕಿ ವಿದ್ಯುತ್ ಕಡಿತಕ್ಕೆ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.
PublicNext
12/10/2020 11:56 am