ಟರ್ಕಿಶ್ ಗಾಯಕಿ ಮೆಲೆಕ್ ಮೊಸ್ಸೊ ಇರಾನ್‌ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗೆ ತಮ್ಮ ಬೆಂಬಲವನ್ನು ಸೂಚಿಸಿದ ಮಹಿಳೆಯರ ಸಾಲನ್ನು ಸೇರಿಕೊಂಡಿದ್ದಾರೆ. ಹೌದು ಇರಾನ್‌ನಲ್ಲಿ ಪ್ರತಿಭಟನಾಕಾರರಿಗೆ ನನ್ನ ಬೆಂಬಲ ಇದೆ ಎಂದು ವೇದಿಕೆಯ ಮೇಲೆ ಕಲಾವಿದೆ ತನ್ನ ಕೂದಲನ್ನು ಕತ್ತರಿಸುತ್ತಿರುವ ವೀಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸೆಪ್ಟೆಂಬರ್ 17ರಂದು ಹಿಜಾಬ್ ನಿಯಮದ ಕುರಿತಾಗಿ ನಡೆದ ಘಟನೆಯಲ್ಲಿ ಪೋಲೀಸರ ಬಂಧನದಲ್ಲಿದ್ದ 22 ವರ್ಷದ ಮಹಾಸಾ ಅಮಿನಿಯ ಮರಣದ ನಂತರ ಇರಾನ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಆಕೆಯ ಸಾವಿನ ಹತ್ತು ದಿನಗಳ ನಂತರ, ಪ್ರತಿಭಟನೆಗಳು ಈಗ ಇರಾನಿ 46 ಕಡೆ ಹರಡಿವೆ. ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಲ್ಲೂ ಈ ಪ್ರತಿಭಟನೆಯ ಕಿಡಿ ಹತ್ತಿಕೊಂಡಿದೆ.
ಭದ್ರತಾ ಪಡೆಗಳೊಂದಿಗಿನ ಘರ್ಷಣೆಯ ನಡುವೆ ನಡೆದ ಪ್ರತಿಭಟನೆಯಲ್ಲಿ 75 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಪ್ರತಿಭಟನೆಕಾರರೂ ಹೇಳಿಕೊಂಡಿದ್ದಾರೆ. ದೇಶದಲ್ಲಿ ಜಾರಿಯಲ್ಲಿರುವ ಕಟ್ಟುನಿಟ್ಟಿನ ಡ್ರೆಸ್ ಕೋಡ್ ವಿರುದ್ಧ ಪ್ರತಿಭಟಿಸಲು ಮಹಿಳಾ ಪ್ರತಿಭಟನಾಕಾರರು ತಮ್ಮ ಕೂದಲನ್ನು ಕತ್ತರಿಸಿ ಹಿಜಾಬ್ ತೆಗೆದು ಬೆಂಕಿ ಹಚ್ಚುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ.
PublicNext
28/09/2022 06:43 pm