ಪ್ರಾಣಿ ಪ್ರೀತಿ ಇರಬೇಕು. ನಮ್ಮಂತೆ ಅವಕ್ಕೂ ಜೀವ ಇದೆ. ಜೀವನ ಇದೆ. ಆದ್ರೆ ಕೆಲವೊಮ್ಮೆ ಪ್ರಾಣಿಗಳು ನಮ್ಮ ಜೀವಕ್ಕೆ ಮಾರಕ ಆಗಿಬಿಡುತ್ತವೆ. ಸದ್ಯ ವೈರಲ್ ಆಗುತ್ತಿರುವ ಎರಡು ಪ್ರತ್ಯೇಕ ಘಟನೆಗಳ ವಿಡಿಯೋಗಳಲ್ಲಿ ಗೂಳಿಗಳು ಮಾರಣಾಂತಿಕ ದಾಳಿ ನಡೆಸಿವೆ.
ಮನೆ ಗೇಟ್ ತೆರೆದು ಆಚೆ ಬಂದ ವ್ಯಕ್ತಿ ಇನ್ನೇನು ಗಾಡಿ ಹತ್ತಬೇಕೆಂದಿದ್ದರು. ಅಷ್ಟರಲ್ಲಿ ಅವರ ಮೇಲೆ ಏಕಾಏಕಿ ದಾಳಿ ಮಾಡಿದ ಗೂಳಿ ಎರಡು ಬಾರಿ ಅವರನ್ನು ಎತ್ತಿ ಬಿಸಾಕಿದೆ. ಕಾಲಲ್ಲಿ ಹಾಕಿ ತುಳಿದು ಮರಣಾಂತಿಕವಾಗಿ ಗಾಯಗೊಳಿಸಿದೆ. ಕೂಡಲೇ ಸ್ಥಳೀಯರು ಧಾವಿಸಿ ಗೂಳಿಯನ್ನು ಬೆದರಿಸಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ಇನ್ನೊಂದು ಘಟನೆಯಲ್ಲಿ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯ ಮೇಲೆ ದಾಳಿ ನಡೆಸಿದ ಗೂಳಿ ಮೂರ್ನಾಲ್ಕು ಬಾರಿ ತಿವಿದು ಮಾರಾಣಾಂತಿಕವಾಗಿ ಗಾಯಗೊಳಿಸಿದೆ.
ಏನೇ ಆಗಲಿ. ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವಾಗ ನಮ್ಮ ಜಾಗೃತೆಯಲ್ಲಿ ನಾವಿರೋದು ಉತ್ತಮ.
PublicNext
21/08/2022 11:04 pm