ಕೇರಳ: ಮಳೆ ನೀರು ತುಂಬಿದ ರಸ್ತೆ ಹೊಂಡಗಳಲ್ಲಿ ನಿಂತು ಹೀಗೆ ಪ್ರತಿಭಟನೆ ಮಾಡಿದ ಕೇರಳದ ವ್ಯಕ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ವ್ಯಕ್ತಿಯೋರ್ವ ನಡೆಸಿದ ಪ್ರೊಟೆಸ್ಟ್ ಭಾರೀ ವೈರಲ್ ಆಗುತ್ತಿದ್ದು, ಅದೂ ಸ್ಥಳೀಯ ಶಾಸಕರ ಮುಂದೆಯೇ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿ ವ್ಯಕ್ತಿಯೋರ್ವ ಗಮನ ಸೆಳೆದಿದ್ದಾರೆ. ರಸ್ತೆಗಳಲ್ಲಿ ಹೆಚ್ಚುತ್ತಿರುವ ಗುಂಡಿಗಳ ಅಪಾಯದ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲು ವಿಶಿಷ್ಟವಾದ ಪ್ರತಿಭಟನೆಯನ್ನು ಮಾಡಿದ್ದಾರೆ.
ವಿಡಿಯೋ ಕ್ಲಿಪ್‌ನಲ್ಲಿ ಬಕೆಟ್ ಮಗ್, ಸೋಪು ಮತ್ತು ಸ್ನಾನದ ಟವೆಲ್‌ನೊಂದಿಗೆ ಹೊರಟ ವ್ಯಕ್ತಿ, ಮಳೆನೀರು ತುಂಬಿದ ಹೊಂಡಗಳಲ್ಲಿ ಸ್ನಾನ ಮಾಡುತ್ತಿರುವುದು ಕಾಣಿಸುತ್ತದೆ. ಕುತೂಹಲದಿಂದ ವಾಹನ ಸವಾರರು ಹಾದು ಹೋಗುತ್ತಿದ್ದಾಗ ಅವರು ರಸ್ತೆಯ ಕೆಸರಿನ ನೀರಿನ ಕೊಳದಲ್ಲಿ ಬಟ್ಟೆ ತೊಳೆಯುತ್ತಿರುವುದನ್ನು ಸಹ ಚಿತ್ರೀಕರಿಸಲಾಗಿದೆ. ಸ್ಥಳೀಯ ಮಾಧ್ಯಮಗಳು ವ್ಯಕ್ತಿಯನ್ನು ಹಮ್ಜಾ ಪೊರಾಲಿ ಎಂದು ವರದಿ ಮಾಡಿವೆ. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
PublicNext
10/08/2022 02:44 pm