ರಸ್ತೆ ಬದಿಯಲ್ಲಿ, ರೈಲ್ವೆಗಳಲ್ಲಿ, ಬೀದಿ ಬದಿಯಲ್ಲಿ, ವ್ಯಾಪಾರಿಗಳು ಮಾರಾಟ ಮಾಡುವುದನ್ನ ನಾವು ನೋಡಿರ್ತೆವೆ. ಜೋರಾಗಿ ಕೂಗ್ತಾರೆ, ಹಾಡ್ತಾರೆ, ಇನ್ನೂ ಬೇರೆ ಬೇರೆ ರೀತಿಯಲ್ಲಿ ಗ್ರಾಹಕರನ್ನ ಆಕರ್ಷಿಸೋಕೆ ವ್ಯಾಪಾರಿಗಳು ಒಂದಿಲ್ಲೊಂದು ರೀತಿಯಲ್ಲಿ ಕಸರತ್ತು ಮಾಡ್ತಾರೆ. ಆದರೆ ಇಲ್ಲೊಬ್ಬ ವ್ಯಾಪಾರಿ ಜನರನ್ನು ತನ್ನತ್ತ ಸೆಳೆಯಲು ವಿಚಿತ್ರ ಪ್ರಯತ್ನ ಮಾಡಿದ್ದಾನೆ.
ಆತ ಮಾರಾಟ ಮಾಡೋ ಸ್ಟೈಲ್ ನೋಡ್ತಿದ್ರೆ ಎಂಥವರೂ ಕೂಡಾ ಬೆಚ್ಚಿಬೀಳ್ತಾರೆ. ಹೌದು ಓರ್ವ ಹಣ್ಣು ಮಾರಾಟಗಾರ ಮೈ ಮೇಲೆ ದೆವ್ವ ಬಂದವರಂತೆ ಕಣ್ಣು ಬಿಡೋದು, ದುರುಗುಟ್ಟಿಕೊಂಡು ನೋಡೋದು, ಕೂಗಾಡೋದು, ಚೀರಾಡೋದು, ಕೊನೆಗೆ ವಿಕಾರವಾಗಿ ನಗೋದು. ಅಷ್ಟೇ ಅಲ್ಲ ಹಣ್ಣನ್ನ ಕೂಡಾ ಕುತ್ತಿಗೆ ಸೀಳಿದ ಹಾಗೆ ಕತ್ತರಿಸುತಾನೆ.
ಆ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಈ ವ್ಯಾಪಾರಿ ಹೀಗೆಲ್ಲ ಮಾಡಿದ್ರೆ ಯಾರು ಹಣ್ಣು ಖರೀದಿ ಮಾಡ್ತಾರೆ ಹೇಳಿ.
ಹೀಗೆ ಒಬ್ಬ ಹಣ್ಣು ಖರೀದಿಗೆ ಹೋದ ಗ್ರಾಹಕ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ. r/funny ಅನ್ನೊ ಟ್ವಿಟರ್ ಅಕೌಂಟ್ ನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು ಅದಕ್ಕೆ "ಈ ಹಣ್ಣು ಮಾರಾಟಗಾರನ ಅವತಾರ ನೋಡ್ತಿದ್ರೆ ನನಗೆ ಹಣ್ಣು ತಿನ್ನೊದೇ ಬೇಡ ಅಂತ ಅನ್ಸುತ್ತೆ" ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
PublicNext
05/07/2022 03:30 pm